ಇಂಡೋನೇಷಿಯಾದಲ್ಲಿ ಪ್ರಯಾಣಿಕರ ಹಡಗಿಗೆ ಬೆಂಕಿ: 23 ಸಾವು

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ 23 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಕಾರ್ತಾದಲ್ಲಿ ನಡೆದಿದೆ...
ಹಡಗಿಗೆ ಬೆಂಕಿ
ಹಡಗಿಗೆ ಬೆಂಕಿ
ಜಕಾರ್ತಾ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ 23 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಕಾರ್ತಾದಲ್ಲಿ ನಡೆದಿದೆ. 
ಜಕಾರ್ತ್ ತಿಡುಂಗ್ ಮೌರ್ರ ಅಂಗ್ಕೆ ದ್ವೀಪದಲ್ಲಿ 100 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇಂಡೋನೇಷಿಯಾ ಅಧಿಕಾರಿಗಳು ತಿಳಿಸಿದ್ದಾರೆ. 
ಸ್ಥಳೀಯ ಹಾನಿ ನಿವಾರಣೆ ಏಜೆನ್ಸಿಯ ಅಧಿಕಾರಿ ಸಿಪ್ಲೇ ಮ್ಯಾಡ್ರೆಟೋ ಅವರು ದುರಂತದಲ್ಲಿ 23 ಮಂದಿ ಸಾವನ್ನಪ್ಪಿದ್ದು 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. 
ಇಂಡೋನೇಷಿಯಾದಲ್ಲಿ ದೋಣಿ ದುರಂತಗಳು ಸಾಮಾನ್ಯವಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com