

ಸೋಲ್: ವಿಶ್ವಸಂಸ್ಥೆ ಹೇರಿರುವ ನಿರ್ಬಂಧವನ್ನು ಮೀರಿ ದೂರಗಾಮಿ ರಾಕೆಟ್ ನ್ನು ಉತ್ತರ ಕೊರಿಯಾ ಉಡಾವಣೆ ಮಾಡಿದೆ.
ವಿಶ್ವಸಂಸ್ಥೆ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅಣ್ವಸ್ತ್ರ ಪ್ರಯೋಗ ನಡೆಸದಂತೆ ಉತ್ತರ ಕೊರಿಯಾಗೆ ಎಚ್ಚರಿಕೆ ನೀಡಿತ್ತು. ಇದೆಲ್ಲವನ್ನು ಮೀರಿ ಉತ್ತರ ಕೊರಿಯಾ ರಾಕೆಟ್ ಉಡಾವಣೆ ಮಾಡಿ ಈ ಕಾರ್ಯದಲ್ಲಿ ಸಂಪೂರ್ಣ ಯಶಸ್ಸು ಪಡೆದಿರುವುದಾಗಿ ಹೇಳಿಕೊಂಡಿದೆ.
ನಿರ್ಬಂಧ ಮೀರಿ ಉತ್ತರ ಕೊರಿಯಾ ದೂರಗಾಮಿ ರಾಕೆಟ್ ಉಡಾವಣೆ ಮಾಡಿರುವುದನ್ನು ಅಮೆರಿಕ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳು ಖಂಡಿಸಿವೆ.
ಉತ್ತರ ಕೊರಿಯಾ ಜನವರಿ 6ರಂದು ಜಲಜನಕ ಬಾಂಬ್ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ಕೂಡ ವಿಶ್ವ ಸಮುದಾಯದ ಟೀಕೆಗೆ ಗುರಿಯಾಗಿತ್ತು.