ಇಸ್ಲಾಮಾಬಾದ್: ಪಟಾಣ್ ಕೋಟ್ ದಾಳಿ ತನಿಖೆಗೆ ಸಂಬಂಧಿಸಿದಂತೆ ಭಾರತಕ್ಕೆ ಪಾಕಿಸ್ತಾನ ಪೂರ್ಣ ರೀತಿ ಸಹಕಾರ ನೀಡಿದೆ ಎಂದು ಪಾಕಿಸ್ತಾನದ ವಿದೇಶಿ ಕಾರ್ಯಾಲಯದ ವಕ್ತಾರ ಹೇಳಿದ್ದಾರೆ.
ಪಾಕಿಸ್ತಾನದ ವಿದೇಶ ಕಾರ್ಯಾಲಯದ ವಕ್ತಾರ ಝಕಾರಿಯಾ ಮಾತನಾಡಿ, ಪಟಾನ್ ಕೋಟ್ ಘಟನೆ ಸಂಬಂಧ ಪಾಕಿಸ್ತಾನ ಭಾರತಕ್ಕೆ ಪೂರ್ಣ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಅದನ್ನು ಮುಂದುವರಿಸಲಿದೆ ಎಂದಿದ್ದಾರೆ.
ಪಠಾಣ್‌ಕೋಟ್‌ನಲ್ಲಿರುವ ಸೇನೆಯ ವಾಯುನೆಲೆಯ ಮೇಲೆ ಜನವರಿ 2ರಂದು ಉಗ್ರರು ದಾಳಿ ನಡೆಸಿದ್ದರು. ಸೇನಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ 6 ಮಂದಿ ಉಗ್ರರು ಮೃತಪಟ್ಟಿದ್ದರು. ಕಾರ್ಯಾಚರಣೆಯಲ್ಲಿ ವಾಯುಸೇನೆಯ ಏಳು ಯೋಧರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದರು.