

ಕಾಬುಲ್: ಆಫ್ಘಾನಿಸ್ತಾನದಲ್ಲಿ ಶನಿವಾರ ನಡೆದ ಪ್ರಬಲ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆಫ್ಘಾನಿಸ್ತಾನದ ಪೂರ್ವಪ್ರಾಂತ್ಯದ ಕುನಾರ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಬೈಕಿನಲ್ಲಿ ಮಾರ್ಕೆಟ್ ಬಳಿ ಬಂಜ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಪೋಟಿಸಿಕೊಳ್ಳುವ ಮೂಲಕ ಅಪಾರ ಪ್ರಮಾಣದ ಸಾವುನೋವು ಉಂಟುಮಾಡಿದ್ದಾನೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವಿನಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸುಮಾರು 2 ಗಂಟೆಗಳೇ ಕಳೆದರೂ ಈ ವರೆಗೂ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಆದರೆ ಈ ಪ್ರಾಂತ್ಯದ್ಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತವಿದ್ದು, ತಾಲಿಬಾನಿ ಉಗ್ರರೇ ಈ ದಾಳಿಯನ್ನು ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.
ತಾಲಿಬಾನ್ ಬಂಡುಕೋರರೊಂದಿಗಿನ ಶಾಂತಿ ಮಾತುಕತೆಗೆ ಆಫ್ಘನ್ ಸರ್ಕಾರ ಸಿದ್ಧವಿದ್ದು, ಮುಂದಿನವಾರ ಶಾಂತಿಮಾತುಕತೆ ನಡೆಯವ ಸ್ಥಳದ ನಿರ್ಣಯ ಕೈಗೊಳ್ಳುವುದರಲ್ಲಿತ್ತು. ಆದರೆ ಅಷ್ಟರಲ್ಲಿಯೇ ಈ ಭೀಕರ ದಾಳಿ ನಡೆಸಲಾಗಿದೆ.