ದುಬೈ ಹೋಟೆಲ್ ಅಗ್ನಿ ದುರಂತದ ವೇಳೆ ಜನರ ರಕ್ಷಣೆ ಮಾಡಿದ ರಾಜಕುಮಾರ

ಡಿಸೆಂಬರ್ 31ರಂದು ಹೊಸ ವರ್ಷಾಚರಣೆಯ ವೇಳೆ ದುಬೈನ ಅಡ್ರೆಸ್ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ದುಬೈ ರಾಜಕುಮಾರ ರಕ್ಷಣಾ...
ದುಬೈ ರಾಜಕುಮಾರ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಅಲ್ ಮಕ್ಟೋಮ್
ದುಬೈ ರಾಜಕುಮಾರ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಅಲ್ ಮಕ್ಟೋಮ್
Updated on: 
ದುಬೈ: ಡಿಸೆಂಬರ್ 31ರಂದು ಹೊಸ ವರ್ಷಾಚರಣೆಯ ವೇಳೆ ದುಬೈನ ಅಡ್ರೆಸ್ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ದುಬೈ ರಾಜಕುಮಾರ ರಕ್ಷಣಾ ಕಾರ್ಯಗಳಲ್ಲಿ ಭಾಗಿಯಾಗಿ ಜನರಿಗೆ ಸಹಾಯ ಮಾಡುತ್ತಿದ್ದ ಫೋಟೋವೀಗ ಟ್ವೀಟರ್‌ನಲ್ಲಿ ಹರಿದಾಡುತ್ತಿದೆ.
ದುಬೈ ರಾಜಕುಮಾರ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಅಲ್ ಮಕ್ಟೋಮ್ ರಕ್ಷಣಾಕಾರ್ಯ ಳಲ್ಲಿ ಭಾಗಿಯಾಗಿರುವ ಫೋಟೋವನ್ನು ಗಲ್ಫ್ ನ್ಯೂಸ್ ಪತ್ರಿಕೆ ಪ್ರಕಟ ಮಾಡಿತ್ತು. ಈ ಚಿತ್ರವನ್ನು ಅದೇ ಪತ್ರಿಕೆಯ ಪತ್ರಕರ್ತರೊಬ್ಬರು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಯುಎಇ ಪ್ರಧಾನಿ ಮತ್ತು ಉಪಾಧ್ಯಕ್ಷರಾಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೋಮ್ ಅವರ ಪುತ್ರ ರಾಜಕುಮಾರ ಶೇಖ್ ಮನ್ಸೂರ್ ದುಬೈ ಇಂಟರ್‌ನ್ಯಾಷನಲ್ ಮರೀನ್ ಸ್ಪೋರ್ಟ್ಸ್ ಕ್ಲಬ್‌ನ ಚೇರ್‌ಮೆನ್ ಆಗಿದ್ದಾರೆ. ತಾನೊಬ್ಬ ರಾಜಕುಮಾರ ಎಂದು ದರ್ಪ ತೋರಿಸದೆ ಪ್ರಜೆಗಳ ರಕ್ಷಣೆಗೆ ಬಂದ ಶೇಖ್ ಮನ್ಸೂರ್‌ಗೆ ಈಗ ಜನರಿಂದ ಪ್ರಶಂಸೆಗೆ ಅರ್ಹವಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com