

ವಾಶಿಂಗ್ಟನ್: ಶೀಘ್ರದಲ್ಲೇ ಗನ್ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿರುವ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಇವುಗಳು ಶಸ್ತ್ರಾಸ್ತ್ರಗಳನ್ನು ಹೊಂದುವ ಸಾಂವಿಧಾನಿಕ ಹಕ್ಕಿಗೆ ಪೂರಕವಾಗಿರುತ್ತದೆ ಎಂದು ಕೂಡ ತಿಳಿಸಿದ್ದಾರೆ.
ಈ ಕ್ರಮಗಳಿಂದಾಗಿ ಎಲ್ಲ ಹಿಂಸೆಯ ಅಪರಾಧಗಳನ್ನು ಅಥವಾ ಶೂಟಿಂಗ್ ಅಪರಾಧಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಬದಲಾಗಿ ಶಸ್ತ್ರಾಸ್ತ್ರಗಳು ತಪ್ಪು ಜನರ ಕೈಸೇರುವುದನ್ನು ತಪ್ಪಿಸಿ ಹಲವರ ಪ್ರಾಣರಕ್ಷಣೆಗೆ ಸಹಾಯ ಮಾಡುತ್ತದೆ ಎಂದು ಒಬಾಮಾ ಹೇಳಿದ್ದಾರೆ.
ಶುಕ್ರಾವಾರದಂದು ತಾವು ನಿಡುವ ರೇಡಿಯೋ ಕಾರ್ಯಕ್ರಮದಲ್ಲಿ, ಗನ್ ಹಿಂಸೆಗಳನ್ನು ತಡೆಯುವುದಕ್ಕೆ ವಿಫಲವಾದ ಕಾಂಗ್ರೆಸ್ ಮೇಲೆ ಒಬಾಮಾ ಹರಿಹಾಯ್ದಿದ್ದಾರೆ.