ಫೇಸ್ ಬುಕ್ ನ ವಾರ್ಷಿಕೋತ್ಸವವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಿ: ಮಾರ್ಕ್ ಜ್ಯೂಕರ್ಬರ್ಗ್

ಸಾಮಾಜಿಕ ಜಾಲತಾಣದ ದೈತ್ಯ ಫೆಸ್ ಬುಕ್ ಸಂಸ್ಥೆಯ 12 ನೇ ವಾರ್ಷಿಕೋತ್ಸವವನ್ನು ಸ್ನೇಹಿತರ ದಿನವನ್ನಾಗಿ ಆಚರಿಸುವಂತೆ ಮಾರ್ಕ್ ಜ್ಯೂಕರ್ಬರ್ಗ್ ಮನವಿ ಮಾಡಿದ್ದಾರೆ.
ಮಾರ್ಕ್ ಜ್ಯೂಕರ್ಬರ್ಗ್
ಮಾರ್ಕ್ ಜ್ಯೂಕರ್ಬರ್ಗ್
Updated on

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಸಂಸ್ಥೆಯ 12 ನೇ ವಾರ್ಷಿಕೋತ್ಸವವನ್ನು ಸ್ನೇಹಿತರ ದಿನವನ್ನಾಗಿ ಆಚರಿಸುವಂತೆ ಫೇಸ್ ಬುಕ್ ನ ಸಿ.ಇ.ಒ, ಮಾರ್ಕ್ ಜ್ಯೂಕರ್ಬರ್ಗ್ ಸುಮಾರು 1 .5 ಬಿಲಿಯನ್ ಬಳಕೆದಾರರಿಗೆ ಮನವಿ ಮಾಡಿದ್ದಾರೆ.
ಫೆ.4 ಕ್ಕೆ ಫೆಸ್ ಬುಕ್ ಗೆ 12 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಮಾರ್ಕ್ ಜ್ಯೂಕರ್ಬರ್ಗ್ ಫೇಸ್ ಬುಕ್ ವಾರ್ಷಿಕೋತ್ಸವವನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಫೆ.4 ರಂದು ನನ್ನೊಂದಿಗೆ ಸ್ನೇಹಿತರ ದಿನವನ್ನು ಆಚರಿಸುತ್ತೀರ ಎಂದು ನಿರೀಕ್ಷಿಸುತ್ತೇನೆ ಎಂದು ಮಾರ್ಕ್ ಜ್ಯೂಕರ್ಬರ್ಗ್ ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ ಡೇಟ್ ಮಾಡಿದ್ದಾರೆ. 
ಫೇಸ್ ಬುಕ್ ಬಳಕೆದಾರರು ತಮ್ಮ ಸ್ನೇಹದ ಬಗೆಗಿನ ಘಟನೆಗಳನ್ನು ಹೇಳಿದರೆ ಕೇಳಲು ಉತ್ಸುಕನಾಗಿದ್ದೇನೆ ಎಂದು ಜ್ಯೂಕರ್ಬರ್ಗ್ ಹೇಳಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿರುವ ಜ್ಯೂಕರ್ಬರ್ಗ್, 2016 ರಲ್ಲಿ ಕೃತಕ ಬುದ್ಧಿಮತ್ತೆ ವಿಷಯದತ್ತ ಗಮನ ಹರಿಸಿ, ಹಾಲಿವುಡ್ ನ ಐರನ್ ಮ್ಯಾನ್ ಚಿತ್ರದಲ್ಲಿರುವಂತೆ ಮನೆ ಹಾಗೂ ಕಚೇರಿಯನ್ನು ನಿರ್ವಹಿಸುವುದಕ್ಕೆ ಕೃತಕ ಬುದ್ಧಿಮತ್ತೆ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com