ಸೊಮಾಲಿಯಾ ವಿಮಾನನಿಲ್ದಾಣದ ಬಳಿ ಜೋಡಿ ಸ್ಫೋಟ; 10 ಸಾವು

ಸೊಮಾಲಿಯಾದ ಮೊಗಾದಿಶು ವಿಮಾನ ನಿಲ್ದಾಣದ ಬಳಿ ನಡೆದ ಎರಡು ಸ್ಫೋಟಗಳಿಂದ ಕನಿಷ್ಟ 10 ಜನ ಸಾವನ್ನಪ್ಪಿದ್ದಾರೆ ಎಂದು ಭಧ್ರತಾ ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೊಗಾದಿಶು: ಸೊಮಾಲಿಯಾದ ಮೊಗಾದಿಶು ವಿಮಾನ ನಿಲ್ದಾಣದ ಬಳಿ ನಡೆದ ಎರಡು ಸ್ಫೋಟಗಳಿಂದ ಕನಿಷ್ಟ 10 ಜನ ಸಾವನ್ನಪ್ಪಿದ್ದಾರೆ ಎಂದು ಭಧ್ರತಾ ಅಧಿಕಾರಿಗಳು ಹೇಳಿದ್ದಾರೆ. 
ಪೂರ್ವ ಆಫ್ರಿಕಾದ ಆಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ವಿಮಾನ ನಿಲ್ದಾಣದ ಬಳಿಯಿರುವ ಹಲನೆ ನೆಲೆಯಯನ್ನು ಉಗ್ರರು ದಾಳಿಯಾಗಿರಿಸಿಕೊಂಡಿದ್ದರು ಎಂದು ಆಫ್ರಿಕಾ ಯೂನಿಯನ್ ನ ವಕ್ತಾರ ಹೇಳಿದ್ದಾರೆ. 
ವಿಮಾನ ನಿಲ್ದಾಣದ ಪ್ರವೇಶದಲ್ಲಿ ಒಂದು ಸ್ಫೋಟ ಸಂಭವಿಸಿದ್ದರೆ, ಚೆಕ್ ಪಾಯಿಂಟ್ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ಸ್ಥಳದಲ್ಲೇ ಇದ್ದ ಪೊಲೀಸ ಅಧಿಕಾರಿ ಅಬ್ದಿಫತಾ ಅಹ್ಮದ್ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ. 
"ವಿವರಗಳು ಇನ್ನು ಸಿಗಬೇಕಿದೆ" ಎಂದು ತಿಳಿಸಿರುವ ಅವರು ಮೃತ ಪಟ್ಟವರ ನಾಗರಿಕತೆ ಇನ್ನು ಗುರುತಿಸಬೇಕಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com