ನ್ಯೂಯಾರ್ಕ್ ಮ್ಯಾಗಜಿನ್ ನಲ್ಲಿ ಡೊನಾಲ್ಟ್ ಟ್ರಂಪ್ ಪತ್ನಿಯ ಬೆತ್ತಲೆ ಫೋಟೋ ಪ್ರಕಟ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಪತ್ನಿಯ ನಗ್ನ ಚಿತ್ರವೊಂದು ಭಾರಿ ಸುದ್ದಿಯಾಗಿದೆ.. ...
ಮಲೇನಿಯಾ
ಮಲೇನಿಯಾ

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಪತ್ನಿಯ ನಗ್ನ ಚಿತ್ರವೊಂದು ಭಾರಿ ಸುದ್ದಿಯಾಗಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿರುವಾಗ ಡೊನಾಲ್ಡ್‌ ಟ್ರಂಪ್‌ ಪತ್ನಿ ಮಲೆನೀಯಾ ಟ್ರಂಪ್ 1990ರಲ್ಲಿ ನಗ್ನ ಫೋಟೋವನ್ನು ತೆಗೆಸಿಕೊಂಡಿದ್ದರು. ಈ ಫೋಟೋವನ್ನು ನ್ಯೂಯಾರ್ಕ್ ಪೋಸ್ಟ್ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಪ್ರಕಟಿಸಿದೆ.

ಇದೇ ಫೋಟೋವನ್ನು 1995ರಲ್ಲಿ ಯೂರೋಪ್‌ದ ಮ್ಯಾಗ್‌ಜಿನ್‌ವೊಂದರಲ್ಲಿ ಪಬ್ಲಿಷ್‌ ಮಾಡಲಾಗಿತ್ತು. ಈ ಚಿತ್ರವನ್ನು ಪ್ರೆಂಚ್ ನ ಫೋಟೋಗ್ರಾಪರ್  ಕ್ಲಿಕ್ಕಿಸಿದ್ದರು.

ಮಲೆನೀಯಾ ಟ್ರಂಪ್‌ ಆಗಿನ ಸಮಯದಲ್ಲಿ ಸೂಪರ್‌ ಮತ್ತು ಗ್ರೇಟ್‌ ಪರ್ಸನಾಲಿಟಿ ಹೊಂದಿದ್ದರು. ಆಗ ನನ್ನನ್ನು ಸಹ ಸೆಳೆದಿದ್ದರು ಎಂದು ಅವರ ನಗ್ನ ಫೋಟೋ ಚಿತ್ರಿಕರಿಸಿದ ಫ್ರೆಂಚ್‌ ಪೋಟೋಗ್ರಾಪರ್‌ ಅಲೆ ಡಿ ಬಸ್ಸೆವಿಲ್ಲೆ ಹೇಳಿದ್ದಾರೆ.

ಇನ್ನು, ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪತಿ ಡೊನಾಲ್ಡ್‌ ಟ್ರಂಪ್‌, ಮಲೇನಿಯಾ ಯಶಸ್ವಿ ಮಾಡೆಲ್‌ ಆಗಿದ್ದರು. ಅವರ ಫೋಟೋಗಳು ಪ್ರಮುಖ ಮ್ಯಾಗಜೀನ್‌ಗಳ ಮುಖಪುಟಗಳಾಗಿದ್ದವು ಎಂದಿದ್ದಾರೆ.

1998 ರಲ್ಲಿ ಈಕೆಗೆ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ನ ಫ್ಯಾಶನ್ ವೀಕ್ ನಲ್ಲಿ ಪರಿಚಸವಾದರು. ನಂತರ ಮಲೇನಿಯಾ 2005ರಲ್ಲಿ ಫ್ಲೋರಿಡಾದ ಪಾಮ್ ಬೀಚ್‌ನ ಮಾರ್ಚ್-ಎ-ಲಾಗೊ ರೆಸಾರ್ಟ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ನ್ನು ವರಿಸಿದ್ದರು.

ಚಿತ್ರವನ್ನು ಪ್ರಕಟಿಸಿರುವುದರಿಂದ ಯಾವುದೇ ಪರಿಣಾಮವಾಗುವುದಿಲ್ಲ, ಮನುಷ್ಯನ ದೇಹವನ್ನು ಕಲೆಯಾಗಿ ನೋಡಿ ಸಂಭ್ರಮಿಸಬೇಕು ಎಂದು ಟ್ರಂಪ್ ನ ಪ್ರಮುಖ ಸಲಹೆಗಾರ ಜಾಸೋನ್ ಮಿಲ್ಲರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com