ಐವರಿ ಕೋಸ್ಟ್ ನಲ್ಲಿ ಉಗ್ರರ ದಾಳಿ: 16 ಜನರ ದುರ್ಮರಣ, 125 ಗಾಯ

ಆಫ್ರಿಕಾ ರಾಷ್ಟ್ರದ ಐವರಿ ಕೋಸ್ಟ್ ನ ಗ್ರ್ಯಾಂಡ್ ಬಾಸ್ಸಮ್ ಕಡಲ ಕಿನಾರೆಯಲ್ಲಿರುವ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಐವರಿ ಕೋಸ್ಟ್: ಆಫ್ರಿಕಾ ರಾಷ್ಟ್ರದ ಐವರಿ ಕೋಸ್ಟ್ ನ ಗ್ರ್ಯಾಂಡ್  ಬಾಸ್ಸಮ್ ಕಡಲ ಕಿನಾರೆಯಲ್ಲಿರುವ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡಿರುವ ಉಗ್ರರು ಗುಂಡಿನ ದಾಳಿಯನ್ನು ನಡೆಸಿದ್ದು, ಪರಿಣಾಮ 16 ಮಂದಿ ದುರ್ಮರಣವನ್ನಪ್ಪಿ, 125ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಐವರಿ ಕೋಸ್ಟ್ ಮೇಲೆ ತಮ್ಮ ಹಿಡಿತ ಸಾಧಿಸಲು ಯತ್ನ ನಡೆಸುತ್ತಿರುವ ಉಗ್ರರು ಈ ದಾಳಿಯನ್ನು ಮಾಡಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ, ದಾಳಿ ನಂತರ ಅಲ್ ಖೈದಾ ಉಗ್ರ ಸಂಘಟನೆ ತಾನೇ ಹೊಣೆಹೊತ್ತುಕೊಂಡಿದೆ. ದಾಳಿಯಲ್ಲಿ ವಿದೇಶಿಯರೂ ಸೇರಿ 16 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಬಂದೂಕು ಹಿಡಿದುಕೊಂಡು 6 ಮಂದಿ ಬೀಚ್ ಬಳಿ ಬಂದಿದ್ದರು. ನೋಡನೋಡುತ್ತಿದ್ದಂತೆ ಎಲ್ಲರೂ ಘೋಷಣೆಗಳನ್ನು ಕೂಗುತ್ತಾ ಗುಂಡು ಹಾರಿಸಲು ಆರಂಭಿಸಿದ್ದರು. ಈ ವೇಳೆ ಹೆದರಿದ ಜನ ಓಡಲು ಆರಂಭಿಸಿದ್ದರು. ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com