ಸ್ಪೇನ್'ನಲ್ಲಿ ಭೀಕರ ಅಪಘಾತ: 13 ವಿದ್ಯಾರ್ಥಿಗಳ ಸಾವು, 30 ಗಾಯ

ಈಶಾನ್ಯ ಸ್ಪೇನ್ ನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಪರಿಣಾಮ 13 ವಿದ್ಯಾರ್ಥಿಗಳು ಸಾವನ್ನಪ್ಪಿ 30 ಕ್ಕೂ ಜನ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...
ಸ್ಪೇನ್'ನಲ್ಲಿ ಭೀಕರ ಅಪಘಾತ: 13 ವಿದ್ಯಾರ್ಥಿಗಳ ಸಾವು, 30 ಗಾಯ (ಸಾಂದರ್ಭಿಕ ಚಿತ್ರ)
ಸ್ಪೇನ್'ನಲ್ಲಿ ಭೀಕರ ಅಪಘಾತ: 13 ವಿದ್ಯಾರ್ಥಿಗಳ ಸಾವು, 30 ಗಾಯ (ಸಾಂದರ್ಭಿಕ ಚಿತ್ರ)
Updated on: 

ಸ್ಪೇನ್: ಈಶಾನ್ಯ ಸ್ಪೇನ್ ನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಪರಿಣಾಮ 13 ವಿದ್ಯಾರ್ಥಿಗಳು ಸಾವನ್ನಪ್ಪಿ 30 ಕ್ಕೂ ಜನ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಕಟಲೋನಿಯಾದ ಫ್ರೋಗಿನಲ್ಸ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಸುಮಾರು 57 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ವೊಂದು ವಲೇನಿಶ್ಯಾ ದಿಂದ ಪ್ಲಾಕಾ ಎಸ್ಪಾನ್ಯಾಗೆ  ತೆರಳುತ್ತಿತ್ತು. ಈ ವೇಳೆ ಎಡಬದಿಯಿಂದ ಕಾರೊಂದು ಬಂದಿದೆ. ನಂತರ ಬಸ್ಸಿನ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ 13 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಘಟನೆ ಕುರಿತಂತೆ ಮಾತನಾಡಿರುವ ಅಲ್ಲಿನ ಅಧಿಕಾರಿಗಳು, ವಿದ್ಯಾರ್ಥಿಗಳು ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದು, ಘಟನೆಯಲ್ಲಿ 43 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಗೆ ಪ್ರಮುಖ ಕಾರಣ ಮಾನವ ನಿರ್ಮಿತ ಸಮಸ್ಯೆಗಳೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com