ಇಂಡೋನೇಷ್ಯಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ: 13 ಸಾವು

ಇಂಡೋನೇಷ್ಯಾದ ಸುಲಾವೇಸಿ ಪ್ರದೇಶದಲ್ಲಿ ಸೇನೆಗೆ ಸೇರಿದ ಹೆಲಿಕಾಪ್ಟರ್ ವೊಂದು ಪತನಗೊಂಡು 13 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ...
ಇಂಡೋನೇಷ್ಯಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ: 13 ಸಾವು (ಸಾಂದರ್ಭಿಕ ಚಿತ್ರ)
ಇಂಡೋನೇಷ್ಯಾದಲ್ಲಿ ಸೇನಾ ಹೆಲಿಕಾಪ್ಟರ್ ಪತನ: 13 ಸಾವು (ಸಾಂದರ್ಭಿಕ ಚಿತ್ರ)
Updated on

ಜಕಾರ್ತ: ಇಂಡೋನೇಷ್ಯಾದ ಸುಲಾವೇಸಿ ಪ್ರದೇಶದಲ್ಲಿ ಸೇನೆಗೆ ಸೇರಿದ ಹೆಲಿಕಾಪ್ಟರ್ ವೊಂದು ಪತನಗೊಂಡು 13 ಜನ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಬೆಲ್ 412 ಚಾಪರ್ ಹೆಲಿಕಾಪ್ಟರ್ ಎಂದಿನಂತೆ ಪರೀಕ್ಷಾರ್ಥ ತರಬೇತಿಗೆಂದು ಇಂದು ಬೆಳಿಗ್ಗೆ ಹಾರಾಟಕ್ಕೆ ಹೊರಟಿದೆ. ಹೆಲಿಕಾಪ್ಟರ್ ನಲ್ಲಿ 13 ಯೋಧರಿದ್ದರು. ಹೆಲಿಕಾಪ್ಟರ್ ಪೊಸೋದ ಕಸಿಗುನ್ಸು ಗ್ರಾಮದ ಬಳಿ ತೆರಳುತ್ತಿದ್ದಂತೆ ಪತನಗೊಂಡಿದೆ. ಘಟನೆಯಲ್ಲಿ 13 ಮಂದಿಯೂ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಸೇನಾ ರಕ್ಷಣಾ ಪಡೆಗಳಿಗೆ 13 ಯೋಧರ ಪೈಕಿ 12 ಮಂದಿಯ ಮೃತದೇಹಗಳು ದೊರಕಿತ್ತು. ಆದರೆ, ಓರ್ವ ಯೋಧನ ಮೃತದೇಹ ಕಣ್ಮರೆಯಾಗಿತ್ತು. ನಂತರ ಯೋಧನ ಮೃತದೇಹಕ್ಕಾಗಿ ಸೇನಾಪಡೆ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಯೋಧನ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com