

ಕೊಲಂಬೊ: ಶ್ರೀಲಂಕಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಂದ ರಾಜಪಕ್ಶೆ ಮಾಡಿರುವ ಭ್ರಷ್ಟಾಚಾರ, ಈಗ ಅವರಿಗೆ ಉರುಳಾಗಿ ಪರಿಣಮಿಸಿದೆ. ರಾಜಪಕ್ಸ ಯವರನ್ನು ಆರೋಪಗಳಿಂದ ಹೊರತರಲು ಕಾನೂನು ಹಾಗೂ ರಾಜಕೀಯ ನೆರವು ವಿಫಲವಾಗಿದ್ದು, ಅವರ ಬೆಂಬಲಿಗರು ಈಗ ಧಾರ್ಮಿಕ ವಿಧಿಗಳ ಮೊರೆ ಹೋಗಿದ್ದಾರೆ.
ಪ್ರಿನ್ಸೆಟಾನ್ ಯೂನಿವರ್ಸಿಟಿಯ ಪ್ರೊ. ಜ್ಞಾನನಾಥ್ ಅವರ ಪ್ರಕಾರ ರಾಜಪಕ್ಶೆ ಬೆಂಬಲಿಗರು ಹಿಂದೂ ದೇವಾಲಯಗಳಲ್ಲಿ ತೆಂಗಿನ ಕಾಯಿ ಒಡೆಯುವ ಧಾರ್ಮಿಕ ವಿಧಿ(ರಿಚ್ಯುಯಲ್ ಕರ್ಸಿಂಗ್)ಹಾಗು ಮಾಂತ್ರಿಕರೊಂದಿಗೆ ಆಂತರಿಕ ಸಭೆಯ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಶ್ರೀಲಂಕಾದ ಸಂಸತ್ ನ ವಿಪಕ್ಷದ ನೇತೃತ್ವ ವಹಿಸಿರುವ ರಾಜಪಕ್ಶೆ ಬೆಂಬಲಿಗ ಸಂಸದರಾದ ದಿನೇಶ್ ಗುಣವರ್ಧನೆ, ಬಂದುಲಾ ಗುಣವರ್ಧನೆ, ಸಿಬಿ ರತ್ನಯಕೆ ಶ್ರೀಲಂಕಾದ ದೇವಾಲಯದಲ್ಲಿ ಫೆ.6 ರಂದು 100,000 ತೆಂಗಿನ ಕಾಯಿಗಳನ್ನು ಒಡೆದಿದ್ದಾರೆ. ಆದರೆ ಅಷ್ಟು ತೆಂಗಿನಕಾಯಿಗಳನ್ನು ಅಕ್ರಮವಾಗಿ ತರಲಾಗಿತ್ತು ಎಂಬ ಕಾರಣಕ್ಕೆ ದೇವಾಲಯ ದೇವತೆ ತೃಪ್ತಿಯಾಗದ ಪರಿಣಾಮ ಈ ಧಾರ್ಮಿಕ ಕ್ರಿಯೆ ವಿಫಲವಾಗಿದೆಯಂತೆ.
ಇದೇ ರೀತಿ ಫೆ.13 ರಂದು ಒಂದು ಧಾರ್ಮಿಕ ಕ್ರಿಯೆಯನ್ನು ನಡೆಸಲಾಗಿದೆ. ಆದರೆ ಇದರಿಂದಾಗಿ ರಾಜಪಕ್ಶೆಗೆ ಕಾನೂನಾತ್ಮಕವಾಗಿ ರಿಲೀಫ್ ದೊರೆಯದೆ ಇದ್ದರೂ, ಮಾ.17 ರಂದು ನಡೆದ ರ್ಯಾಲಿ ಯಶಸ್ವಿಯಾಗಿದ್ದು ಬೆಂಬಲಿಗರಲ್ಲಿ ಆತ್ಮವಿಶ್ವಾಸ ಮೂಡಲು ನೆರವಾಗಿದೆ ಎಂಬ ನಂಬಿಕೆ ಉಂಟಾಗಿದೆ.