ರಾಜಸ್ಥಾನದಲ್ಲಿ ಪಾಕಿಸ್ತಾನದ 35 ಪ್ರಜೆಗಳ ಬಂಧನ

ಅಪೂರ್ಣ ದಾಖಲೆಗಳನ್ನು ಹೊಂದಿದ್ದ ಪಾಕಿಸ್ತಾನದ 35 ಪ್ರಜೆಗಳನ್ನು ರಾಜಸ್ಥಾನ ಪೊಲೀಸರು ಶನಿವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಸಲ್ಮೆರ್: ಅಪೂರ್ಣ ದಾಖಲೆಗಳನ್ನು ಹೊಂದಿದ್ದ ಪಾಕಿಸ್ತಾನದ 35 ಪ್ರಜೆಗಳನ್ನು ರಾಜಸ್ಥಾನ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ರಾಮದೇವ್ರಾ ಜಿಲ್ಲೆಗೆ ಭೇಟಿ ನೀಡಿದ್ದ 35 ಪಾಕಿಸ್ತಾನ ಪ್ರಜೆಗಳು ತಾರ್ ಮರುಭೂಮಿ, ಮುನಭಾವ್ ಮುಖಾಂತರ ಭಾರತಕ್ಕೆ ಬಂದಿದ್ದರು. ಮಥುರಾ ಮತ್ತು ಹರಿದ್ವಾರಕ್ಕೆ ಭೇಟಿ ನೀಡುವ ಸಲುವಾಗಿ ಇವರಿಗೆ ವೀಸಾ ನೀಡಲಾಗಿತ್ತು. 
ಆದರೆ, ಈ 35 ಪಾಕಿಸ್ತಾನ ಪ್ರಜೆಗಳು ರಾಮದೇವ್ರಾ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಾಬಾ ರಾಮದೇವ ದೇಲಾಯಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ. 
ಈ ಪ್ರಜೆಗಳು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಅಮರ್ ಕೋಟ್, ಮಿರ್ ಪುರು ಖಾಸ್ ಮ್ತು ತಾರ್ ಪರಕರ್ ಪ್ರದೇಶದವಾರಾಗಿದ್ದಾರೆ. ಬಂಧಿತರನ್ನು ಮತ್ತಷ್ಟು ಜಂಟಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com