

ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯಲ್ಲಿ ಕಾಶ್ಮೀರ ವಿಷಯವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಚೌಧರಿ ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಗ್ಗೆ ಮಾತನಾಡಿರುವ ಅಜೀಜ್ ಚೌಧರಿ, ಪಾಕ್- ಭಾರತದ ದ್ವಿಪಕ್ಷಿಯ ಮಾತುಕತೆ ಯಾವಾಗ ನಡೆದರೂ ಅದರಲ್ಲಿ ಕಾಶ್ಮೀರವೇ ಪ್ರಮುಖ ವಿಷಯವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಬಂಧಿತ ಭಾರತೀಯ ಕುಲ್ ಭೂಷಣ್ ಯಾದವ್ ಬಗ್ಗೆಯೂ ಮಾತನಾಡಿರುವ ಚೌಧರಿ, ಬಲೂಚಿಸ್ತಾನದಲ್ಲಿ ಭಾರತದ ಗೂಢಚಾರ ಬಂಧನಕ್ಕೊಳಗಾಗಿರುವುದು, ಪಾಕಿಸ್ತಾನದ ಆಂತರಿಕ ವಿಚಾರಗಳಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದಾರೆ.
ಭಾರತ- ಪಾಕಿಸ್ತಾನದ ನಡುವಿನ ಮಾತುಕತೆ ಉತ್ತಮಗೊಳ್ಳಬೇಕೆಂದರೆ ನಂಬಿಕೆಯ ಕೊರತೆಯನ್ನು ದೂರಮಾಡಬೇಕು ಎಂದು ಅಜೀಜ್ ಚೌಧರಿ ಹೇಳಿದ್ದಾರೆ.