ಎನ್ಎಸ್ ಜಿ ಗೆ ಸೇರ್ಪಡೆಗೆ ಭಾರತ ಸಿದ್ಧವಾಗಿದೆ: ಚೀನಾ ಅಡ್ಡಿ ಹೊರತಾಗಿಯೂ ಭಾರತದ ಪರ ನಿಂತ ಅಮೆರಿಕ

ವಾಷಿಂಗ್ ಟನ್: ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ಕನಸಿಗೆ ಮತ್ತೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿರುವುದರ ಹೊರತಾಗಿಯೂ ಅಮೆರಿಕ ಭಾರತದ ಪರವಾಗಿ ನಿಂತಿದೆ.
ಎನ್ಎಸ್ ಜಿ ಸಮೂಹಕ್ಕೆ ಭಾರತ ಸೇರ್ಪಡೆಯಾಗುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ರಕ್ಷಣಾ ಇಲಾಖೆ ವಕ್ತಾರ ಜಾನ್ ಕಿರ್ಬೆ, ಭಾರತ ಎನ್ಎಸ್ ಜಿ ಸಮೂಹಕ್ಕೆ ಸೇರ್ಪಡೆಗೊಳ್ಳುವುದರ ಬಗ್ಗೆ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿದ್ದು ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತಕ್ಕೆ ಅಗತ್ಯವಿರುವ ಅರ್ಹತೆ ಹೊಂದಿದ್ದು ಎನ್ ಎಸ್ ಜಿ ಸಮೂಹಕ್ಕೆ ಸೇರಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಚೀನಾ ಹಾಗೂ ಪಾಕಿಸ್ತಾನ ಭಾರತ ಎನ್ಎಸ್ ಜಿ ಗೆ ಸೇರ್ಪಡೆಯಾಗಲು ಅಡ್ಡಗಾಲು ಹಾಕುತ್ತಿದೆ ಎಂಬ ವರದಿ ಬೆನ್ನಲ್ಲೇ ಜಾನ್ ಕಿರ್ಬೆ ಈ ಹೇಳಿಕೆ ನೀಡಿದ್ದು, ಎನ್ ಎಸ್ ಜಿ ಸಮೂಹಕ್ಕೆ ಹೊಸ ರಾಷ್ಟ್ರಗಳ ಸೇರ್ಪಡೆಯ ಚರ್ಚೆ ಈಗಿರುವ ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯ ಎಂದು ಕಿರ್ಬೆ ತಿಳಿಸಿದ್ದಾರೆ.
ಪರಮಾಣು ಪೂರೈಕೆದಾರರ ಸಮೂಹ( ಎನ್ಎಸ್ ಜಿ) ಗೆ ಭಾರತ ಸೇರ್ಪಡೆಯಾಗುವ ಸಾಧ್ಯತೆಗಳು ನಿಚ್ಚಳವಾದರೆ ತನ್ನ ವೆಟೋ ಅಧಿಕಾರವನ್ನು ಬಳಕೆ ಮಾಡುವ ಮೂಲಕ ಭಾರತವನ್ನು ತಡೆಯಲು ಚೀನಾ ಪ್ರಯತ್ನಿಸಿದೆ ಎಂದು ಅಮೆರಿಕದ ಉನ್ನತ ಮೂಲಗಳು ತಿಳಿದ್ದರ ಬಗ್ಗೆಯೂ ವರದಿಗಳು ಪ್ರಕಟವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


