ವಿದೇಶ

ಮೇಕ್ ಇನ್ ಇಂಡಿಯಾಗೆ ಕೈ ಜೋಡಿಸಲು ಚೀನಾ ಉದ್ಯಮಿಗಳಿಗೆ ಪ್ರಣಬ್ ಮುಖರ್ಜಿ ಆಹ್ವಾನ

ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಚೀನಾ ಉದ್ಯಮಿಗಳನ್ನು ಭೇಟಿ ಮಾಡಿದ್ದು ಮೆಕ್ ಇನ್ ಇಂಡಿಯಾದೊಂದಿಗೆ ಕೈ ಜೋಡಿಸುವಂತೆ ಆಹ್ವಾನಿಸಿದ್ದಾರೆ.

ಮೇಕ್ ಇನ್ ಇಂಡಿಯಾಗೆ ಕೈ ಜೋಡಿಸಲು ಚೀನಾ ಉದ್ಯಮಿಗಳಿಗೆ ಪ್ರಣಬ್ ಮುಖರ್ಜಿ ಆಹ್ವಾನ
ಚೀನಾ ಪ್ರವಾಸದಲ್ಲಿರುವ ಪ್ರಣಬ್ ಮುಖರ್ಜಿ
Published On :

ಗುವಾಂಗ್ಝೌ: ನಾಲ್ಕು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಚೀನಾ ಉದ್ಯಮಿಗಳನ್ನು ಭೇಟಿ ಮಾಡಿದ್ದು ಮೇಕ್ ಇನ್ ಇಂಡಿಯಾದೊಂದಿಗೆ ಕೈ ಜೋಡಿಸುವಂತೆ ಆಹ್ವಾನಿಸಿದ್ದಾರೆ.
ಭಾರತದಲ್ಲಿ ಹೂಡಿಕೆ ಹಾಗೂ  ಉತ್ಪಾದನೆ ಮಾಡಲು ಚೀನಾ ಉದ್ಯಮಿಗಳಿಗೆ ಭಾರತ ಅತ್ಯುತ್ತಮ ವಾತಾವರಣ ಒದಗಿಸಲಿದೆ ಎಂದು ಪ್ರಣಬ್ ಮುಖರ್ಜಿ ಭರವಸೆ ನೀಡಿದ್ದಾರೆ. ಭಾರತ- ಚೀನಾಗೆ ಆರ್ಥಿಕ ಹಾಗೂ ವಾಣಿಜ್ಯ ಸಹಕಾರದ ವಿಷಯದಲ್ಲಿ ಅದ್ಭುತವಾದ ಸಮಾರ್ಥ್ಯವಿದೆ ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನಮ್ಮಲ್ಲಿರುವ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಉಭಯ ರಾಷ್ಟ್ರಗಳ ಉದ್ಯಮ ಸಮುದಾಯದ ನಡುವೆ ಇರುವ ಮಾಹಿತಿಯ ಅಂತರವನ್ನು ಕಡಿಮೆ ಮಾಡಬೇಕು, ಭಾತತ ಚೀನಾ ಉದ್ಯಮಿಗಳಿಗೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಲು ಸಿದ್ಧವಿದೆ ಎಂದು ಪ್ರಣಬ್ ಮುಖರ್ಜಿ ಚೀನಾ ಉದ್ಯಮಿಗಳಿಗೆ ತಿಳಿಸಿದ್ದಾರೆ.
ಮೇ.24 ರಿಂದ ಚೀನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಬೀಜಿಂಗ್ ಗೂ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.