ಚೀನಾ ನಿರ್ಮಿತ ಕರಾಚಿ ಪರಮಾಣು ಘಟಕ ಕಾಮಗಾರಿ ಶೀಘ್ರದಲ್ಲೇ ಕಾರ್ಯಾರಂಭ

ಚೀನಾದ ನೆರವನೊಂದಿಗೆ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ಪರಮಾಣು ಸ್ಥಾವರದ ಕಾಮಗಾರಿ ಶೀಘ್ರದಲ್ಲಿಯೇ ಕರಾಚಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕರಾಚಿ ಪರಮಾಣು ಘಟಕ (ಸಂಗ್ರಹ ಚಿತ್ರ)
ಕರಾಚಿ ಪರಮಾಣು ಘಟಕ (ಸಂಗ್ರಹ ಚಿತ್ರ)

ನವದೆಹಲಿ: ಚೀನಾದ ನೆರವನೊಂದಿಗೆ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಿರುವ ಪರಮಾಣು ಸ್ಥಾವರದ ಕಾಮಗಾರಿ ಶೀಘ್ರದಲ್ಲಿಯೇ ಕರಾಚಿಯಲ್ಲಿ ಆರಂಭವಾಗಲಿದೆ ಎಂದು ಮೂಲಗಳು  ತಿಳಿಸಿವೆ.

ಮೂಲಗಳ ಪ್ರಕಾರ ಪಾಕಿಸ್ತಾನದಲ್ಲಿ ಚೀನಾ ದೇಶ ನಿರ್ಮಾಣ ಮಾಡುತ್ತಿರುವ ಪರಮಾಣು ಘಟಕಗಳ ಪೈಕಿ ಕರಾಚಿಯಲ್ಲಿರುವ 3ನೇ ಘಟಕ ಇನ್ನೊಂದು ವಾರದಲ್ಲಿ ತನ್ನ ಕಾಮಗಾರಿ  ಆರಂಭಿಸಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಸುದ್ಧಿ ಸಂಸ್ಥೆ ಡಾನ್ ವರದಿ ಮಾಡಿರುವಂತೆ 3ನೇ ತಲೆಮಾರಿನ ನ್ಯೂಕ್ಲಿಯರ್ ರಿಯಾಕ್ಟರ್ ವಿನ್ಯಾಸ ಮಾದರಿ ಪರಮಾಣು ಘಟಕ ಕೆ3  ಶೀಘ್ರದಲ್ಲಿ ತನ್ನ ಕಾಮಗಾರಿ ಆರಂಭಿಸಲಿದೆ ಎಂದು ವರದಿ ಮಾಡಿದೆ.

ಚೀನಾದ ರಾಷ್ಟ್ರೀಯ ಪರಮಾಣು ಕಾರ್ಪೊರೇಷನ್ (ಸಿಎನ್ಎನ್ ಸಿ) ವಕ್ತಾರ ಪ್ಯಾನ್ ಜಿಯಾನ್ ಮಿಂಗ್ ಅವರು ಹೇಳಿರುವಂತೆ ಹಾಲಾಂಗ್ ಒನ್ ತಂತ್ರಜ್ಞಾನದಡಿಯಲ್ಲಿ ಪಾಕಿಸ್ತಾನದಲ್ಲಿ  ಪರಮಾಣು ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಪೈಕಿ ಕೆ2 ಘಟಕ 3ನೇ ತಲೆಮಾರಿನ ನ್ಯೂಕ್ಲಿಯರ್ ಘಟಕ ವಿನ್ಯಾಸ ಹೊಂದಿರಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಈ ಘಟಕದ  ಕಾಮಗಾರಿ ಆರಂಭವಾಗಿದ್ದು, ಕಳೆದ ಆಗಸ್ಟ್ ನಿಂದ ಈ ಘಚಕದ ಕಾಮಗಾರಿ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com