

ಮೆಕ್ಸಿಕೋ: ಪ್ರಯಾಣಿಕ ವಿಮಾನದಲ್ಲಿ ಹಾವು ಕಂಡ ಜನ ಹೆದರಿ ಕಿರುಚಾಡಿದ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.
ಟೊರೊಯಿನ್ ನಿಂದ ಮೆಕ್ಸಿಕೋ ನಗರಕ್ಕೆ ಆಗಮಿಸಿದ್ದ ಏರೋಮೆಕ್ಸಿಕೋ ವಿಮಾನದಲ್ಲಿ ಹಾವು ಪತ್ತೆಯಾಗಿದ್ದು, ವಿಮಾನದ ಲಗೇಜ್ ಬಾಕ್ಸ್ ನಲ್ಲಿ ಹಾವು ಅವಿತಿತ್ತು ಎಂದು ಪ್ರಯಾಣಿಕುರ ಹೇಳಿದ್ದಾರೆ. ಕೆಲ ಪ್ರಯಾಣಿಕರು ಇದನ್ನು ವಿಡಿಯೋ ಮಾಡಿಕೊಂಡಿದ್ದು, ಲಗೇಜ್ ಬಾಕ್ಸ್ ನಿಂದ ಹೊರಬಂದ ಹಾವು ಬಳಿಕ ಕೆಳಗೆ ಬಿದ್ದಿದೆ. ಹಾವು ವಿಮಾನದೊಳಗೆ ಹೇಗೆ ಮತ್ತು ಯಾವಾಗ ಬಂತು ಎಂಬ ವಿಚಾರವೇ ಸಿಬ್ಬಂದಿಗಳಿಗೆ ತಿಳಿದಿಲ್ಲ.
ಬಳಿಕ ಪ್ರಯಾಣಿಕರ ಕಿರುಚಾಟ ಕೇಳಿದ ಪೈಲಟ್ ವಿಚಾರ ತಿಳಿದು ವಿಮಾನವನ್ನು ಕೂಡಲೇ ತುರ್ತು ಭೂಸ್ಪರ್ಶ ಮಾಡಿಸಿದ್ದಾನೆ. ಬಳಿಕ ವಿಮಾನದೊಳಗೆ ಆಗಮಿಸಿದ ಸಿಬ್ಬಂದಿಗಳು ಹಾವನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ. ಘಟನೆಯಿಂದಾಗಿ ವಿಮಾನ ಸುಮಾರು 10 ನಿಮಿಷಗಳ ಕಾಲ ತಡವಾಗಿ ಮತ್ತೆ ಪ್ರಯಾಣ ಆರಂಭಿಸಿದೆ.
ಇಂಡಾಲೇಸಿಯೋ ಮಡಿನಾ ಎಂಬ ಪ್ರಯಾಣಿಕರೊಬ್ಬರು ಹಾವು ಕೆಳಗೆ ಇಳಿದು ಬರುತ್ತಿರುವುದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2006ರಲ್ಲಿ ಸ್ನೇಕ್ ಇನ್ ಪ್ಲೇನ್ ಎಂಬ ಹಾಲಿವುಡ್ ಚಿತ್ರವೊಂದು ತೆರೆಕಂಡಿತ್ತು. ಈ ಚಿತ್ರದಲ್ಲೂ ಕೂಡ ವಿಮಾನದೊಳಗೆ ಹಾವುಗಳು ಸೇರಿಕೊಳ್ಳುವ ಅದರಿಂದ ಪ್ರಯಾಣಿಕರು ಪರದಾಡುವ ಪ್ರಸಂಗವನ್ನು ಹೇಳಲಾಗಿತ್ತು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ