ಇಸ್ಲಾಮಿಕ್ ಅಲ್ಲದ ರಾಜಾ ದಿನಗಳನ್ನು ಘೋಷಿಸದಂತೆ ಶಾಲೆಗಳಿಗೆ ನಿರ್ಬಂಧ ಹೇರಿದ ಸೌದಿ

ಇಸ್ಲಾಮ್ ಗೆ ಸಂಬಂಧಿಸದ ದಿನಗಳಂದು ರಜೆ ಘೋಷಿಸದಂತೆ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಇದು ಕ್ರಿಸ್ಮಸ್, ಹೊಸ ವರ್ಷ ಮುಂದಾದ ಆಚರಣೆಗಳಿಗೂ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಿಯಾದ್: ಇಸ್ಲಾಮ್ ಗೆ ಸಂಬಂಧಿಸದ ದಿನಗಳಂದು ರಜೆ ಘೋಷಿಸದಂತೆ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಇದು ಕ್ರಿಸ್ಮಸ್, ಹೊಸ ವರ್ಷ ಮುಂದಾದ ಆಚರಣೆಗಳಿಗೂ ಅನ್ವಯಿಸುತ್ತದೆ. 
ಈ ನಿಷೇಧದ ಪ್ರಕಾರ ಅಂತಹ ದಿನಗಳಂದು ರಜೆ ನೀಡುವುದು, ಅದಕ್ಕಾಗಿ ಪರೀಕ್ಷೆಗಳ ದಿನಾಂಕಗಳನ್ನು ಮಾರ್ಪಾಡು ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಪರೀಕ್ಷೆಗಳನ್ನು ನಡೆಸಲು ಮತ್ತು ರಜೆ ನೀಡಲು ಶೆಕ್ಷಣಿಕ ಕ್ಯಾಲೆಂಡರ್ ಅನ್ನು ಮಾತ್ರ ಬಳಸುವಂತೆ ಶಾಲೆಗಳಿಗೆ ತಿಳಿಸಿದ್ದು ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. 
ಸೌದಿ ಅರೇಬಿಯಾ ಸನ್ನಿ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ರಾಷ್ಟ್ರವಾಗಿದ್ದು ಜೀವನದ ಎಲ್ಲ ನಡೆಯಲ್ಲೂ ಇಸ್ಲಾಮಿಕ್ ನಿಯಮಗಳನ್ನು ಅನುಸರಿಸುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com