ಪಾಕ್ ನ್ನು ಉಗ್ರ ರಾಷ್ಟ್ರವನ್ನಾಗಿ ಘೋಷಿಸಲು ಒತ್ತಾಯಿಸಿರುವ ಆನ್ ಲೈನ್ ಅರ್ಜಿಗೆ ಅರ್ಧ ಮಿಲಿಯನ್ ಗು ಹೆಚ್ಚು ಸಹಿ!

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸಿ ಪ್ರಾರಂಭಿಸಲಾಗಿದ್ದ ಆನ್ ಲೈನ್ ಅರ್ಜಿಗೆ ದಾಖಲೆಯ ಪ್ರಮಾಣದಲ್ಲಿ ಸಹಿ ಸಂಗ್ರಹವಾಗುತ್ತಿದ್ದು...
ಪಾಕ್ ನ್ನು ಉಗ್ರ ರಾಷ್ಟ್ರವನ್ನಾಗಿ ಘೋಷಿಸಲು ಒತ್ತಾಯಿಸಿರುವ ಆನ್ ಲೈನ್ ಅರ್ಜಿಗೆ ಅರ್ಧ ಮಿಲಿಯನ್ ಗು ಹೆಚ್ಚು ಸಹಿ!
ಪಾಕ್ ನ್ನು ಉಗ್ರ ರಾಷ್ಟ್ರವನ್ನಾಗಿ ಘೋಷಿಸಲು ಒತ್ತಾಯಿಸಿರುವ ಆನ್ ಲೈನ್ ಅರ್ಜಿಗೆ ಅರ್ಧ ಮಿಲಿಯನ್ ಗು ಹೆಚ್ಚು ಸಹಿ!

ವಾಷಿಂಗ್ ಟನ್: ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಆಗ್ರಹಿಸಿ ಪ್ರಾರಂಭಿಸಲಾಗಿದ್ದ ಆನ್ ಲೈನ್ ಅರ್ಜಿಗೆ ದಾಖಲೆಯ ಪ್ರಮಾಣದಲ್ಲಿ ಸಹಿ ಸಂಗ್ರಹವಾಗುತ್ತಿದ್ದು, 30 ದಿನಗಳ ಅವಧಿಯಲ್ಲಿ ಬರೋಬ್ಬರಿ ಒಂದು ಮಿಲಿಯನ್ ಸಹಿ ಸಂಗ್ರಹವಾಗುವ ನಿರೀಕ್ಷೆ ಇದೆ.

ಶ್ವೇತ ಭವನ ಪ್ರಾರಂಭಿಸಿದ್ದ ಆನ್ ಲೈನ್ ಅರ್ಜಿಗೆ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾದ ಕೇವಲ 6 ದಿನಗಳಲ್ಲಿ ಕನಿಷ್ಠ ಅಗತ್ಯವಿದ್ದ ಒಂದು ಲಕ್ಷ ಸಹಿ ಸಂಗ್ರಹವಾಗಿತ್ತು. ಈಗ ಸಂಗ್ರಹವಾಗಿರುವ ಸಹಿಯ ಸಂಖ್ಯೆ ಅರ್ಧ ಮಿಲಿಯನ್ ದಾಟಿದ್ದು 30 ದಿನಗಳ ಒಳಗಾಗಿ ಒಂದು ಮಿಲಿಯನ್ ಸಹಿಗಳನ್ನು ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವ ಆನ್ ಲೈನ್ ಅರ್ಜಿಗೆ ನಿರೀಕ್ಷಿತ ಸಹಿ ಬಂದಿರುವ ಹಿನ್ನೆಲೆಯಲ್ಲಿ 60 ದಿನಗಳಲ್ಲಿ ಬರಾಕ್ ಒಬಾಮ ಘೋಷಣೆಯ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಅಕ್ಟೊಬರ್ 21 ವರೆಗೆ ಸಹಿ ಹಾಕಲು ಅವಕಾಶ ನೀಡಲಾಗಿದ್ದು, ಶ್ವೇತ ಭವನದ ಮಾದರಿಯಲ್ಲೇ ಬ್ರಿಟನ್ ಸಂಸತ್ ನಲ್ಲೂ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾಗಿದ್ದು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com