ಆಫ್ಘನ್ ಸೇನಾ ಹೆಲಿಕಾಪ್ಟರ್ ಪತನ: 8 ಯೋಧರ ಸಾವು

ಉತ್ತರ ಆಪ್ಘಾನಿಸ್ತಾನದ ಬಗ್ಲಾನ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದರಿಂದ 8 ಮಂದಿ ಆಪ್ಘನ್ ಯೋಧರು ...
ದವ್ಲಾತ್ ವಜಿರಿ
ದವ್ಲಾತ್ ವಜಿರಿ

ಕಾಬೂಲ್: ಉತ್ತರ ಆಪ್ಘಾನಿಸ್ತಾನದ ಬಗ್ಲಾನ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದರಿಂದ 8 ಮಂದಿ ಆಪ್ಘನ್ ಯೋಧರು ಸಾವನ್ನಪ್ಪಿದ್ದಾರೆ.

ಹೆಲಿಕಾಪ್ಟರ್ ನ 5 ಸಿಬ್ಬಂದಿ ಹಾಗೂ 3 ಆಫ್ಘನ್ ಯೋಧರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ದಾಂಡ್ ಗೋರಿ ಜಿಲ್ಲೆಯಲ್ಲಿ ತಾಂತ್ರಿಕ ಕಾರಣದಿಂದ ಪತನವಾಗಿದೆ ಎಂದು ಆಪ್ಘನ್ ರಕ್ಷಣಾ ಇಲಾಖೆ ವಕ್ತಾರ ದವ್ಲಾತ್ ವಜಿರಿ ತಿಳಿಸಿದ್ದಾರೆ.

ತಾಲಿಬಾನ್ ಜಿಬಾವುಲ್ ಮುಜಾಹಿದ್ ಹೆಲಿಕಾಪ್ಟರ್ ಪತನದ ಹೊಣೆ ಹೊತ್ತುಕೊಂಡಿದೆ. ಇತ್ತೀಚೆಗೆ ಉಗ್ರರು ಆಫ್ಘನ್ ರಕ್ಷಣಾ ಪಡೆ ಮೇಲೆ ಹೆಚ್ಚಿನ ದಾಳಿ ನಡೆಸುತ್ತಿವೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com