ಅಡಾಲ್ಫ್ ಹಿಟ್ಲರ್ ಮನೆ ನೆಲಸಮಕ್ಕೆ ಸಿದ್ಧತೆ: ಆಸ್ಟ್ರಿಯಾ

ಅಡಾಲ್ಫ್‌ ಹಿಟ್ಲರ್ ಜನಿಸಿದ್ದ, ಉತ್ತರ ಆಸ್ಟ್ರಿಯಾದಲ್ಲಿರುವ ವಿವಾದಿತ ಮನೆಯನ್ನು ಕೆಡವಲು ಆಸ್ಟ್ರಿಯಾ ಸರ್ಕಾರ ನಿರ್ಧರಿಸಿದೆ. ...
ಹಿಟ್ಲರ್ ಮನೆ
ಹಿಟ್ಲರ್ ಮನೆ

ವಿಯೆನ್ನಾ: ಅಡಾಲ್ಫ್‌ ಹಿಟ್ಲರ್ ಜನಿಸಿದ್ದ, ಉತ್ತರ ಆಸ್ಟ್ರಿಯಾದಲ್ಲಿರುವ ವಿವಾದಿತ ಮನೆಯನ್ನು ಕೆಡವಲು ಆಸ್ಟ್ರಿಯಾ ಸರ್ಕಾರ ನಿರ್ಧರಿಸಿದೆ.

ಮನೆಯನ್ನು ಕೆಡವಿ ಅಡಿಪಾಯವನ್ನು ಹಾಗೆಯೇ ಉಳಿಸಲಿದ್ದೇವೆ. ಆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಅದನ್ನು ದತ್ತಿ ಸಂಸ್ಥೆಗೆ ಅಥವಾ ಆಡಳಿತಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಸ್ಟ್ರೀಯಾ ಸಂಸತ್ತಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಂಬಂಧ ಆಸ್ಟ್ರಿಯಾ ಸಂಸತ್ತಿನಲ್ಲಿ ಮಸೂದೆಯೊಂದನ್ನು ಪಾಸಪ ಮಾಡಲಾಗಿದೆ. ಅಡಾಲ್ಫ್ ಹಿಟ್ಲರ್ ಮನೆ ಮಾಲೀಕತ್ವ ಹೊಂದಿರುವ ಮಾಲೀಕರಿಗೆ ಪರಿಹಾರ ಹಣ ನೀಡಿ ಮನೆಯನ್ನು ನೆಲಸಮ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.  ನೆಲಸಮಕ್ಕೆ ಸಿದ್ಧತೆ ನಡೆಯುತ್ತಿದ್ದು 2017 ಕ್ಕೆ ಈ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಹಿಟ್ಲರ್ ಮನೆಯು ನಾಜಿಗಳ ಯಾತ್ರಾಸ್ಥಳ ಆಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com