ಪಾಕಿಸ್ತಾನ ಮಸೀದಿಯೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ: 24 ಸಾವು, 28 ಗಾಯ

ಪಾಕಿಸ್ತಾನ ಆಫ್ಘಾನಿಸ್ತಾನ ಗಡಿ ಭಾಗದಲ್ಲಿ ಮೊಹಮ್ಮದ್ ಬುಡಕಟ್ಟು ಜಿಲ್ಲೆಯ ಅನ್ಬರ್ ತೇಸಿಲ್ ನ ಮಸೀದಿಯೊಂದರಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ...
ಆತ್ಮಾಹುತಿ ಬಾಂಬ್ ದಾಳಿ
ಆತ್ಮಾಹುತಿ ಬಾಂಬ್ ದಾಳಿ
Updated on: 
ಫತಾ(ಪಾಕಿಸ್ತಾನ): ಪಾಕಿಸ್ತಾನ ಆಫ್ಘಾನಿಸ್ತಾನ ಗಡಿ ಭಾಗದಲ್ಲಿ ಮೊಹಮಂದ್ ಜಿಲ್ಲೆಯ ಅನ್ಬರ್ ತೇಸಿಲ್ ನ ಮಸೀದಿಯೊಂದರಲ್ಲಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ದಾಳಿಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ. 
ಪಾಕಿಸ್ತಾನ ಫತಾ ಪ್ರದೇಶದ ಮಸೀದಿಯೊಂದರಲ್ಲಿ ಮುಸ್ಲಿಂರು ಶುಕ್ರವಾರದ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆತ್ಮಾಹುತಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಈ ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದು 28ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. 
ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಪಾಕಿಸ್ತಾನಿ ತಾಲಿಬಾನಿಗಳು ಆಗಾಗ ಕೋರ್ಟ್, ಶಾಲೆ ಮತ್ತು ಮಸೀದಿಗಳ ಮೇಲೆ ನಡೆಸುವ ದಾಳಿಗಳಂತೆ ಇದು ಒಂದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com