ಪತ್ನಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಪ್ರಿಯಕರನ ಗುಪ್ತಾಂಗ ಕತ್ತರಿಸಿದ ಪತಿರಾಯ

ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಜ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬಾವು: ತನ್ನ ಪತ್ನಿ ಪರಪುರುಷನೊಂದಿಗೆ ಇದ್ದದ್ದನ್ನು ನೋಡಿದ ಆಕ್ರೋಶಗೊಂಜ ಪತಿ ಚಾಕುವಿನಿಂದ ಆತನ ಗುಪ್ತಾಂಗವನ್ನು ಕತ್ತರಿಸಿರುವ ಘಟನೆ ಪಿಲಿಫ್ಫೀನ್ಸ್ ನ ಕಾಮ್ ಸೂರ್ ನಲ್ಲಿ ನಡೆದಿದೆ.

ಗಾಸ್ಪರ್ ಎರ್ಮೋ ಗುಡಿಸಲೊಂದರಲ್ಲಿ ಮಹಿಳೆ ಜೊತೆ ಇದ್ದ. ಈ ವೇಳೆ ವಿಕ್ಟರ್ ಎಂಬಾತ ಗುಡಿಸಲೊಳಗ್ಗೆ ನುಗ್ಗಿದ್ದಾನೆ. ನಂತರ ಪತಿಯನ್ನು ಕಂಡ ಮಹಿಳೆ ಸ್ಥಳದಿಂದ ಓಡಿದ್ದಾಳೆ. ಆದರೆ ಪತ್ನಿಯ ಪ್ರಿಯಕರನನ್ನು ಕಂಡು ರೊಚ್ಚಿಗೆದ್ದ ಪತಿ ಚೂರಿಯಿಂದ ಹಿಗ್ಗಾಮುಗ್ಗಾ ಇರಿದಿದ್ದಾನೆ. ಮಾತ್ರವಲ್ಲದೆ ಮರ್ಮಾಂಗವನ್ನೇ ಕತ್ತರಿಸಿದ್ದಾನೆ.

ತೀವ್ರವಾಗಿ ಗಾಯಗೊಂಡಿರುವ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ  ಚಿಕಿತ್ಸೆ ನೀಡಲಾಗುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com