ಅಮೆರಿಕಾಗೆ ಅಪ್ರತಿಮ ಕೊಡುಗೆ; ಹಿಂದೂ ಸಮುದಾಯವನ್ನು ಹೊಗಳಿದ ಡೊನಾಲ್ಡ್ ಟ್ರಂಪ್

ವಿಶ್ವ ನಾಗರೀಕತೆ ಹಾಗೂ ಅಮೆರಿಕ ಸಂಸ್ಕೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ಹಿಂದೂ ಸಮುದಾಯವನ್ನು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ.,..
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ವಿಶ್ವ ನಾಗರೀಕತೆ ಹಾಗೂ ಅಮೆರಿಕ ಸಂಸ್ಕೃತಿಗೆ ಅವಿಸ್ಮರಣೀಯ ಕೊಡುಗೆ ನೀಡಿದ ಹಿಂದೂ ಸಮುದಾಯವನ್ನು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೊಗಳಿದ್ದಾರೆ.

ಮುಂದಿನ ತಿಂಗಳು ನ್ಯೂಜೆರ್ಸಿಯಲ್ಲಿ ನಡೆಯುವ ಇಂಡಿಯನ್ -ಅಮೆರಿಕನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ 70 ವರ್ಷದ ಟ್ರಂಪ್, ಇಸ್ಲಾಮಿಕ್ ಭಯೋತ್ಪಾದನೆಯಿಂದ ಜಾಗತಿಕ ಸಂತ್ರಸ್ತರಿಗೆ ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಹಿಂದೂ ಸಮುದಾಯ ಅಮೆರಿಕಾ ಸಂಸ್ಕೃತಿಗೆ ಅವಿನಸ್ಮರಣೀಯ ಕೊಡುಗೆ ನೀಡಿದೆ. ಶ್ರಮ ಜೀವನ, ಕೌಟುಂಬಿಕ ಮೌಲ್ಯ, ಹಾಗೂ ಕಠಿಣ ವಿದೇಶಾಂಗ ನೀತಿಯನ್ನು ನಾವು ಅನುಸಿಸುತ್ತೇವೆ ಎಂದು ಹೇಳಿದ್ದಾರೆ.

ಅಕ್ಟೋಬರ್ 15 ರಂದು ನ್ಯೂ ಜೆರ್ಸಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಹೇಳಿ ಟ್ರಂಪ್ 24 ಸೆಕೆಂಡುಗಳ ವಿಡಿಯೋ ಸಂದೇಶ ಕಳುಹಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com