ಕ್ಲಿಂಟನ್, ಟ್ರಂಪ್ ಗಿಂತಲೂ ಮೂರು ಅಂಕಗಳಷ್ಟು ಮುಂದಿದ್ದಾರೆ: ಚುನಾವಣಾಪೂರ್ವ ಸಮೀಕ್ಷೆ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ತಮ್ಮ ವಿರೋಧಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗಿಂತಲೂ ರಾಷ್ಟ್ರದಾದ್ಯಂತ 3 ಅಂಕಗಳಷ್ಟು
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ತಮ್ಮ ವಿರೋಧಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗಿಂತಲೂ ರಾಷ್ಟ್ರದಾದ್ಯಂತ 3 ಅಂಕಗಳಷ್ಟು ಮುಂದಿದ್ದಾರೆ ಎಂದು ಇತ್ತೀಚಿನ ಚುನಾವಣಾಪೂರ್ವ ಸಮೀಕ್ಷೆ ಹೇಳಿದೆ.
ಕ್ಲಿಂಟನ್ ಅವರು 43% ನಿಂದ ಟ್ರಂಪ್ (40%) ಗಿಂತಲೂ ಮುಂದಿದ್ದಾರೆ ಎಂದು ಫಾಕ್ಸ್ ನ್ಯೂಸ್ ಸಮೀಕ್ಷೆ ತಿಳಿಸಿದೆ.
ಈ ಹಿಂದೆ ಅಧ್ಯಕ್ಷೀಯ ಚರ್ಚೆಗಿಂತಲೂ ಮುಂಚಿತವಾಗಿ ಮಾಡಿದ್ದ ಸಮೀಕ್ಷೆಗೆ ಹೋಲಿಸಿದರೆ, ಈ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಕ್ಲಿಂಟನ್ ಪರವಾಗಿ ಹೆಚ್ಚು ಬೆಂಬಲ ಚಿಮ್ಮಿದೆ ಎಂದು ಸಮೀಕ್ಷೆ ತಿಳಿಸಿದೆ.
ಈ ಹಿಂದಿನ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಟ್ರಂಪ್ ಕ್ಲಿಂಟನ್ ಗಿಂತಲೂ ಮುಂದಿದ್ದರು.