ಅಮೆರಿಕ ಸೇನೆ ಬಗ್ಗೆ ಹೆಮ್ಮೆ ಇದೆ: ಡೊನಾಲ್ಡ್ ಟ್ರಂಪ್

ಇದೊಂದು ಯಶಸ್ವೀ ಕಾರ್ಯಾಚರಣೆಯಾಗಿದ್ದು, ಅಮೆರಿಕ ಸೇನೆಯ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಾಷಿಂಗ್ಟನ್: ಇದೊಂದು ಯಶಸ್ವೀ ಕಾರ್ಯಾಚರಣೆಯಾಗಿದ್ದು, ಅಮೆರಿಕ ಸೇನೆಯ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೇಳಿದ್ದಾರೆ.

ಗುರುವಾರ ಸ್ಥಳೀಯ ಸಮಯ ಸುಮಾರು 7ಗಂಟೆ ಹೊತ್ತಿನಲ್ಲಿ ಅಮೆರಿಕ ಸೇನಾಪಡೆಯ ಎಂಸಿ 130 ದೈತ್ಯ ಯುದ್ಧ ವಿಮಾನ ಮೊಅಬ್ ಬಾಂಬ್ ಅನ್ನು ಹೊತ್ತು ಆಫ್ಘಾನಿಸ್ತಾನದ ನಂಗರ್‌ ಹಾರ್‌ ನ ಇಸ್ಲಾಮಿಕ್ ಸ್ಟೇಟ್ ಉಗ್ರರ  ಅಡಗುದಾಣದ ಮೇಲೆ ಹಾಕಿತ್ತು.

ಇದಕ್ಕೆ ಸಂಬಂಧಿಸಿದಂತೆ ವಿಶ್ವಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಅಮೆರಿಕ ಸೇನಾಪಡೆಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್,  ಯೋಜನೆಯಂತೆ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಾಂಬ್ ದಾಳಿ ನಡೆಸುವ ಕುರಿತು ನಾನೇ ಸಹಿ ಹಾಕಿದ್ದೆ. ಸೇನಾಪಡೆಗಳ ಕಾರ್ಯಾಚರಣೆ ನಿರೀಕ್ಷೆಯಂತೆ ಯಶಸ್ಸುಗೊಂಡಿದ್ದು, ಅಮೆರಿಕ ಸೇನೆ ಬಗ್ಗೆ ತುಂಬಾ ಹೆಮ್ಮೆ ಮತ್ತು  ಗೌರವವಿದೆ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com