ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಾಗಿ ಬಳಸಬೇಡಿ: ಭಾರತಕ್ಕೆ ಚೀನಾ

ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ ನೀಡಿರುವ್ದನ್ನು ವಿರೋಧಿಸುತ್ತಿರುವ ಚೀನಾ, ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಗಿ ಬಳಸಿಕೊಳ್ಳಬೇಡಿ ಎಂದಿದೆ.
ದಲೈ ಲಾಮ
ದಲೈ ಲಾಮ
Updated on: 
ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ ನೀಡಿರುವ್ದನ್ನು ವಿರೋಧಿಸುತ್ತಿರುವ ಚೀನಾ, ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಗಿ ಬಳಸಿಕೊಳ್ಳಬೇಡಿ ಎಂದಿದೆ. 
ಈ ಹಿಂದೆ ಹಲವು ಕಾರಣಗಳಿಗಾಗಿ ಭಾರತ-ಚೀನಾದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು ನಮಗೆ ತಿಳಿದಿದೆ ಆದ್ದರಿಂದ ದಲೈ ಲಾಮ ಅವರನ್ನು ದಾಳವನ್ನಾಗಿ ಬಳಕೆ ಮಾಡಿಕೊಳ್ಳುವುದನ್ನು, ಟಿಬೆಟ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಭಾರತ ಬಿಡಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ. 
ಟಿಬೆಟ್ ನ ವಿಷಯದಲ್ಲಿ ಹಸ್ತಕ್ಷೇಪ ಮಾಡದೇ ಇರುವ ಬದ್ಧತೆಯನು ಭಾರತ ಪ್ರದರ್ಶಿಸಿದರೆ ಗಡಿ ವಿವಾದ ಇತ್ಯರ್ಥಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com