ಇವನೆಂತ ಭೂಪ ಕಂಡ್ರಿ, ಮಾಲ್‌ಗೆ ಹುಲಿ ಜೊತೆ ವಾಕಿಂಗ್ ಹೋಗ್ತಾನೆ!

ರಷ್ಯಾದ ಕೆರೆಲಿಯಾದಲ್ಲಿರುವ ಲೋಟಸ್ ಪ್ಲಾಜಾ ಮಾಲ್ ವೊಂದಕ್ಕೆ ಆಸಾಮಿಯೊಬ್ಬ ಹುಲಿಯನ್ನು ಕರೆದುಕೊಂಡು ಹೋಗಿ ಅಚ್ಚರಿ ಮೂಡಿಸಿದ್ದಾನೆ...
ಹುಲಿ
ಹುಲಿ
ಕೆರೆಲಿಯಾ(ರಷ್ಯಾ): ರಷ್ಯಾದ ಕೆರೆಲಿಯಾದಲ್ಲಿರುವ ಲೋಟಸ್ ಪ್ಲಾಜಾ ಮಾಲ್ ವೊಂದಕ್ಕೆ ಆಸಾಮಿಯೊಬ್ಬ ಹುಲಿಯನ್ನು ಕರೆದುಕೊಂಡು ಹೋಗಿ ಅಚ್ಚರಿ ಮೂಡಿಸಿದ್ದಾನೆ. 
ವ್ಯಕ್ತಿಯೊಂದಿಗೆ ಹುಲಿಯನ್ನು ಕಂಡಾಕ್ಷಣ ಮಾಲ್ ಗೆ ಬಂದಿದ್ದ ಜನರು ಒಂದು ಕ್ಷಣ ಬೆಚ್ಚಿ ಬಿದ್ದರು. ನಂತರ ತಮ್ಮ ಮೊಬೈಲ್ ಗಳನ್ನು ತೆಗೆದುಕೊಂಡು ರಾಜ ಗಾಂಭೀರ್ಯವಾಗಿ ನಡೆಯುತ್ತಿದ್ದ ಹುಲಿಯ ಫೋಟೋಗಳನ್ನು ಸೆರೆ ಹಿಡಿದರು. 
ಇನ್ನು ಸ್ಥಳೀಯರೊಬ್ಬರು ಹುಲಿಯ ವಾಕ್ ಅನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು ವಿಡಿಯೋ ಸಖತ್ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com