

ಯಾಂಗನ್: ಮಯನ್ಮಾರ್ ನ ಖ್ಯಾತ ವಾಟರ್ ಫೆಸ್ಟಿವಲ್ ನಲ್ಲಿ ಮತ್ತೆ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದ್ದು, ಈ ಬಾರಿ ಬರೊಬ್ಬರಿ 285 ಮಂದಿ ಸಾವನ್ನಪ್ಪಿ, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವಂತೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಭಾರಿಯ ಉತ್ಸವದಲ್ಲಿನ ಸಾವಿನ ಸಂಖ್ಯೆಯಲ್ಲಿ 13 ಮಂದಿಯ ಏರಿಕೆಯಾಗಿದೆ. ಕಳೆದ ವರ್ಷ ಇದೇ ವಾಟರ್ ಫೆಸ್ಟಿವಲ್ ನಲ್ಲಿ 272 ಮಂದಿ ಸಾವನ್ನಪ್ಪಿದ್ದರು. ಇನ್ನು ಈ ಉತ್ಸವದ ವೇಳೆ ವಿವಿಧ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಈ ವರೆಗೂ ಸುಮಾರು 1200ಕ್ಕೂ ಅಧಿಕ ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ. ಕೊಲೆ, ಕಾರು ಅಪಘಾತ, ಮಾದಕ ವಸ್ತುಗಳ ಬಳಕೆ, ಕಳ್ಳತನ, ಅಕ್ರಮ ಶಸ್ತ್ರಾಸ್ತ್ರ, ಸಾಮೂಹಿಕ ಹಿಂಸಾಚಾರ ದಂತಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇನ್ನು ಮಯನ್ಮಾರ್ ದೇಶಾದ್ಯಂತ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿನ ಸಾವಿನ ಸಂಖ್ಯೆ 285ಕರಷ್ಟಿದ್ದು, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನೇಯ್ ಪ್ಯಿಟಾವ್ ನಲ್ಲಿ 10 ಮಂದಿ, ಯಾಂಗೊನ್ ನಲ್ಲಿ 44, ಮ್ಯಾಂಡಲೆಯಲ್ಲಿ 36, ಸ್ಯಾಗಿಂಗ್ ಪ್ರಾಂತ್ಯದಲ್ಲಿ 26, ಟ್ಯಾನಿಂತರ್ಯಿ ಪ್ರದೇಶದಲ್ಲಿ 11, ಬಗೋ ಪ್ರದೇಶದಲ್ಲಿ 37, ಮ್ಯಾಗ್ವೇಯಲ್ಲಿ 11, ಸೊಮ ದಲ್ಲಿ 12, ರಾಖಿನೆ ಪ್ರಾಂತ್ಯದಲ್ಲಿ 17 ಮತ್ತು ಸಾನು ಪ್ರದೇಶದಲ್ಲಿ 29 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಮಯನ್ಮಾರ್ ಜನತೆ ತಮ್ಮ ಹೊಸ ವರ್ಷದ ಆಚರಣೆ ತಿಂಗ್ಯಾನ್ ಆಚರಣೆ ಮಾಡುತ್ತಾರೆ. ಇದನ್ನು ವಾಟರ್ ಫೆಸ್ಟಿವಲ್ ಎಂದೂ ಕರೆಯುತ್ತಾರೆ. ಪರಸ್ಪರರ ಸಾಮೂಹಿಕ ಮೇಲೆ ನೀರರೆಚಿಕೊಳ್ಳುವ ಮೂಲಕ ಜನ ಪರಸ್ಪರ ಶುಭಾಶಯ ಕೋರುತ್ತಾರೆ. ನಾಲ್ಕು ದಿನಗಳ ಕಾ ಈ ಉತ್ಸವ ನಡೆಯಲಿದ್ದು, ಈ ವೇಳೆ ಹಲವು ಹಿಂಸಾಚಾರ ಪ್ರಕರಣಗಳು ನಡೆಯುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.