30 ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಿ ಪಾಕ್ ಸೇನಾ ಮುಖ್ಯಸ್ಥ ಸಹಿ

ಪೇಶಾವರ್ ಶಾಲೆ ಮೇಲೆ ದಾಳಿ ಮಾಡಿ 144 ಮಕ್ಕಳ ಹತ್ಯೆಗೆ ಕಾರಣವಾಗಿದ್ದ ತಾಲಿಬಾನ್ ಉಗ್ರ ಸಂಘಟನೆಯ 30 ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಗೆ...
ಖಮರ್ ಜಾವೇದ್ ಬೆಜ್ವಾ
ಖಮರ್ ಜಾವೇದ್ ಬೆಜ್ವಾ
Updated on
ಇಸ್ಲಾಮಾಬಾದ್: ಪೇಶಾವರ್ ಶಾಲೆ ಮೇಲೆ ದಾಳಿ ಮಾಡಿ 144 ಮಕ್ಕಳ ಹತ್ಯೆಗೆ ಕಾರಣವಾಗಿದ್ದ ತಾಲಿಬಾನ್ ಉಗ್ರ ಸಂಘಟನೆಯ 30 ಭಯೋತ್ಪಾದಕರಿಗೆ ಗಲ್ಲು ಶಿಕ್ಷೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥರು ಸಹಿ ಹಾಕಿದ್ದಾರೆ. 
ಮಿಲಿಟರ್ ಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಉಗ್ರರಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಪಾಕಿಸ್ತಾನ ಸರ್ಕಾರ ಸಹ ಪೇಶಾವರ ದಾಳಿ ನಂತರ ಮರಣ ದಂಡನೆ ಮೇಲಿನ ನಿಷೇಧವನ್ನು ತೆರವುಗೊಳಿಸಿದ್ದು ಇದೀಗ 30 ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ವಿಧಿಸುವುದು ನಿಶ್ಛಳವಾಗಿದೆ. 
ಇನ್ನು ಮಿಲಿಟರ್ ಕೋರ್ಟ್ 30 ಉಗ್ರರಿಗೆ ನೀಡಿರುವ ಗಲ್ಲು ಶಿಕ್ಷೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್‌ ಬಾಜ್ವಾ ಅವರು ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಪೇಶಾವರ್ ಶಾಲೆಯ ಮೇಲಿನ ಉಗ್ರರ ದಾಳಿಯಲ್ಲಿ 144 ಮಕ್ಕಳು ಸೇರಿದಂತೆ 150 ಮಂದಿ ಸಾವನ್ನಪ್ಪಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com