ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಮಸೂದ್ ಅಜರ್ ಹೆಸರು ಸೇರಿಸಲು ಮತ್ತೆ ಚೀನಾದಿಂದ ಅಡ್ಡಗಾಲು

ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.
ಮಸೂದ್ ಅಜರ್
ಮಸೂದ್ ಅಜರ್
Updated on
ಯುನೈಟೆಡ್ ನೇಷನ್ಸ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. 
ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಫ್ರಾನ್ಸ್, ಅಮೆರಿಕ, ಬ್ರಿಟನ್ ಬೆಂಬಲಿಸಿವೆ. ಆದರೆ ಚೀನಾ ಎಂದಿನಂತೆ ಈ ಬಾರಿಯೂ ತಾಂತ್ರಿಕ ಅಡಚಣೆಯೊಡ್ಡಿದೆ. ಈ ಮೂಲಕ ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿರ್ಬಂಧ ವಿಧಿಸುವ ಪ್ರಸ್ತಾವನೆಗೆ ಎದುರಾಗಿರುವ ಅಡಚಣೆ ಮತ್ತೆ 3 ತಿಂಗಳ ಕಾಲ ಮುಂದುವರೆಯಲಿದೆ. 
ಇದಕ್ಕೂ ಮುನ್ನ ಮಸೂದ್ ಅಜರ್ ಗೆ ವಿಶ್ವಸಂಸ್ಥೆಯಿಂದ ನಿರ್ಬಂಧ ವಿಧಿಸುವ ಅಮೆರಿಕದ ಪ್ರಸ್ತಾವನೆಗೆ ಚೀನಾ ಫೆಬ್ರವರಿಯಲ್ಲಿ ಅಡ್ಡಗಾಲು ಹಾಕಿತ್ತು. ಚೀನಾ ಫೆಬ್ರಬರಿ ತಿಂಗಳಲ್ಲಿ ದಾಖಲಿಸಿದ್ದ ತಾಂತ್ರಿಕ ತಡೆ ಆ.02 ವರೆಗೆ ಸಿಂಧುತ್ವ ಹೊಂದಿತ್ತು. ಆ.02 ರಂದು ಮತ್ತೆ ಈ ವಿಷಯ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಾಗಿದ್ದು ಚೀನಾ ಮತ್ತೊಮ್ಮೆ ಹಳೆ ಚಾಳಿಯನ್ನು ಮುಂದುವರೆಸಿದ್ದು, ನ.02 ವರೆಗೆ ಚೀನಾ ದಾಖಲಿಸಿರುವ ತಾಂತ್ರಿಕ ತಡೆ ಮುಂದುವರೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com