50 ಭಾರತೀಯ ಮೀನುಗಾರರನ್ನು ಬಂಧಿಸಿದ ಲಂಕಾ ನೌಕಾಪಡೆ

ಶ್ರೀಲಂಕಾ ಜಲಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಯೋಧರು ಭಾರತದ 50 ಮೀನುಗಾರರನ್ನು ಬಂಧಿಸಿದ್ದು, ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕೊಲೊಂಬೋ: ಶ್ರೀಲಂಕಾ ಜಲಗಡಿಯಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಯೋಧರು ಭಾರತದ 50 ಮೀನುಗಾರರನ್ನು ಬಂಧಿಸಿದ್ದು, ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತೀಯ ಮೀನುಗಾರರು 12 ಬಲೆಗಳ ಸಮೇತ ನಿಷೇಧಿತ ಶ್ರೀಲಂಕಾ ಜಲಗಡಿಯಲ್ಲಿ ಮೀನುಗಾರಿಕೆಗೆ ಆಗಮಿಸಿದ್ದರು ಎಂದು ಲಂಕಾ ನೌಕಾಪಡೆ ವಕ್ತಾರ ತಿಳಿಸಿದ್ದಾರೆ.
ಜಾಫ್ನಾದ ಕರಾಯ್ ನಗರದ ಮೀನುಗಾರಿಕೆ ಬಂದರಿನಲ್ಲಿದ್ದ ಆರೋಪಿಗಳನ್ನು ಮೀನುಗಾರಿಕಾ ಪರಿಶೀಲನಾ ಕಚೇರಿ ವಶಕ್ಕೆ ಬಂಧಿತರನ್ನು ನೀಡಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಾನೂನು ಬಾಹಿರವಾಗಿ ಮೀನಾಗರಿಕೆಯಲ್ಲಿ ತೊಡಗುತ್ತಿರುವ ಎರಡು ದೇಶಗಳ ಮೀನುಗಾರರು ಪದೇ ಪದೇ ಬಂಧಿಸಲ್ಪಡಲಾಗುತ್ತಿದೆ. ಕರಾವಳಿ ತೀರದಲ್ಲಿ ಸರಿಯಾದ ಗಡಿ ಗುರುತಿಸುವ ಅಧುನಿಕ ಗಡಿ ನಿರ್ಧಾರ ತಂತ್ರಜ್ಞಾನ ವಿಲ್ಲದ ಕಾರಣ ಈ ರೀತಿಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com