ಶಿಕಾಗೋದಲ್ಲಿ ಶೂಟೌಟ್‌: 19 ವರ್ಷದ ಭಾರತೀಯ ಯುವಕನ ಹತ್ಯೆ

ಶಿಕಾಗೋದ ಡಾಲ್ಟನ್‌ ನಲ್ಲಿ ಪೆಟ್ರೋಲ್‌ ಬಂಕ್‌ ಒಂದರ ಮೇಲೆ ದರೋಡೆಕೋರರು ಗುರುವಾರ ತಡರಾತ್ರಿ ಗುಂಡಿನ ದಾಳಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿಕಾಗೋ: ಶಿಕಾಗೋದ ಡಾಲ್ಟನ್‌ ನಲ್ಲಿ ಪೆಟ್ರೋಲ್‌ ಬಂಕ್‌ ಒಂದರ ಮೇಲೆ ದರೋಡೆಕೋರರು ಗುರುವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಭಾರತೀಯ ಮೂಲದ 19 ವರ್ಷದ ಯುವಕ ಮೃತಪಟ್ಟಿದ್ದು, ಆತನ ಸಂಬಂಧಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಿಬಿಎಸ್‌ ಶಿಕಾಗೋ ವರದಿ ಮಾಡಿದೆ.
ದರೋಡೆಕೋರರಿಂದ ಹತ್ಯೆಯಾದ ಯುವಕ ಆರ್ಷದ್‌ ವೋರಾ ಎಂದು ಗುರುತಿಸಲಾಗಿದ್ದು, ಈತ ಗುಜರಾತ್‌ ಮೂಲದವನೆಂದು ಎಎನ್ ಐ ಸುದ್ದಿಸಂಸ್ಥೆ ವರದಿ ತಿಳಿಸಿದೆ.
ಆರ್ಷದ್‌ ವೋರಾ ತನ್ನ ಕುಟುಂಬದ ಒಡೆತನಕ್ಕೆ ಸೇರಿದ ಪೆಟ್ರೋಲ್ ಸ್ಟೇಷನ್‌ ಮತ್ತು ಅದಕ್ಕೆ ಹೊಂದಿಕೊಂಡಂತೆ ಇದ್ದ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದರೋಡೆಕೋರರು ದಾಳಿ ಮಾಡಿದ್ದಾರೆ ಎಂದು ಶಿಕಾಗೋ ಸನ್‌ ಟೈಮ್ಸ್‌ ವರದಿ ಮಾಡಿದೆ.
ದಾಳಿಯಲ್ಲಿ 55 ವರ್ಷದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಆತನ ಹೆಸರನ್ನು ಪೊಲೀಸರು ಇನ್ನು ಪ್ರಕಟಿಸಿಲ್ಲ. ಆದರೆ ಈ ಕೊಲೆ ಪ್ರಕರಣವನ್ನು ಭೇದಿಸಲು ನೆರವಾದವರಿಗೆ 12,000 ಡಾಲರ್‌ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com