ಕೌಟುಂಬಿಕ ಕಲಹ: ಹೆಂಡತಿಯ ಎರಡು ಕಿವಿ ಕತ್ತರಿಸಿದ ಭೂಪ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕಿವಿ ಕತ್ತರಿಸಿರುವ ಘಟನೆ ಉತ್ತರ ಆಪ್ಘಾನಿಸ್ತಾನದಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಜರ್ -ಇ- ಶರೀಫ್: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕಿವಿ ಕತ್ತರಿಸಿರುವ ಘಟನೆ ಉತ್ತರ ಆಪ್ಘಾನಿಸ್ತಾನದಲ್ಲಿ ನಡೆದಿದೆ.

ಝರೀನಾ ಎಂಬ 23 ವರ್ಷದ ಮಹಿಳೆ ಮೇಲೆ ಆತನ ಪತಿ ಈ ದುಷ್ಕೃತ್ಯ ಎಸಗಿದ್ದು ಆಕೆಗೆ ಮಜರ್ -ಇ- ಶರೀಫ್ವ  ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆಸ್ಪತ್ರೆಯ  ನಿರ್ದೇಶಕ ಮೊಹಮದ್ ಫಯಾಜ್ ಹೇಳಿದ್ದಾರೆ.

ಆತನ ಜೊತೆ ತಾನು ಸಂಸಾರ ಮಾಡುವುದಿಲ್ಲ, ನನಗೆ ವಿಚ್ಛೇದನ ಬೇಕು, ಆತನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂತ್ರಸ್ತ ಮಹಿಳೆ ಜರೀನಾ ಹೇಳಿದ್ದಾಳೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಕಷ್ಟದ ಪರಿಸ್ಥಿತಿ ಇದ್ದಿದ್ದರಿಂದ ಜರೀನಾ ತನ್ನ 13 ನೇ ವಯಸ್ಸಿನಲ್ಲಿ ಆತನನ್ನು ವಿವಾಹವಾಗಿದ್ದಾಗಿ ಆಕೆ ವೈದ್ಯರ ಬಳಿ ಹೇಳಿದ್ದಾಳೆ,

ಎರಡು ಕಿವಿ ಕತ್ತರಿಸಿದ್ದು, ತುಂಬಾ ರಕ್ತಸ್ರಾವವಾಗಿದೆ, ಆಕೆಗೆ ಚಿಕಿತ್ಸೆ ನೀಡುತ್ತಿದ್ದು, ಅವಶ್ಯಕತೆ ಇದ್ದರೇ ಆಕೆಯನ್ನು ವಿದೇಶಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕಾಗಿ ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com