ಉಗ್ರವಾದದ ವಿರುದ್ಧ ಹೋರಾಟಕ್ಕೆ ಕೆನಡಾ, ಬ್ರಿಟನ್ ಪ್ರಧಾನಿಗಳ ಪ್ರತಿಜ್ಞೆ
ಉಗ್ರವಾದದ ವಿರುದ್ಧ ಹೋರಾಟಕ್ಕೆ ಕೆನಡಾ, ಬ್ರಿಟನ್ ಪ್ರಧಾನಿಗಳ ಪ್ರತಿಜ್ಞೆ

ಉಗ್ರವಾದದ ವಿರುದ್ಧ ಹೋರಾಟಕ್ಕೆ ಕೆನಡಾ, ಬ್ರಿಟನ್ ಪ್ರಧಾನಿಗಳ ಪ್ರತಿಜ್ಞೆ

ಕೆನಡಾ ಪ್ರಧಾನಿ ಜಸ್ಟಿನ್ ಟುಡರ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಎಲ್ಲಾ ವಿಧದ ಭಯೋತ್ಪಾದನೆಗಳ ವಿರುದ್ಧದ ಹೋರಾಟಕ್ಕೆ ಸಹಕರಿಸುವುದಾಗಿ ಹೇಳಿದ್ದಾರೆ.
ಒಟ್ಟಾವಾ: ಕೆನಡಾ ಪ್ರಧಾನಿ ಜಸ್ಟಿನ್ ಟುಡರ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಎಲ್ಲಾ ವಿಧದ ಭಯೋತ್ಪಾದನೆಗಳ ವಿರುದ್ಧದ ಹೋರಾಟಕ್ಕೆ ಸಹಕರಿಸುವುದಾಗಿ ಹೇಳಿದ್ದಾರೆ. 
ಕೆನಡಾದಲ್ಲಿ ಮಸೀದಿ ಮೇಲೆ ಜ.29 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 6 ಜನರಿಗೆ ಸಂತಾಪ ಸೂಚಿಸಿರುವ ಬ್ರಿಟನ್ ಪ್ರಧಾನಿ ಥೆರೇಸಾ ಮೇ,  ಭಯೋತ್ಪಾದನೆ ವಿರುದ್ಧ ಹೋರಾಟನಡೆಸಲು ಸಹಕರಿಸುವುದಾಗಿ ಕೆನಡಾ ಪ್ರಧಾನಿಗೆ ಹೇಳಿದ್ದಾರೆ. 
ಉಭಯ ಪ್ರಧಾನಿಗಳೂ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪ್ರತಿಜ್ಞೆ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಇದೇ ವೇಳೆ ಉಭಯ ಪ್ರಧಾನಿಗಳು ವಾಣಿಜ್ಯ ವ್ಯಹವಾರ, ಹೂಡಿಕೆಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com