ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಒಡೆತನದ ವಸ್ತ್ರ ಬ್ರಾಂಡ್ ಬಗ್ಗೆ ಟಿವಿಯಲ್ಲಿ ಜಾಹಿರಾತು ನೀಡಿದ ಅಧ್ಯಕ್ಷರ ಸಲಹೆಗಾರ ಕೆಲ್ಲ್ಯಾನ್ ಕಾನ್ವೆ ಕಾಣಿಸಿಕೊಂಡಿರುವುದಕ್ಕೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಕೆಲ್ಲ್ಯಾನ್ ಕಾನ್ವೆ
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಒಡೆತನದ ವಸ್ತ್ರ ಬ್ರಾಂಡ್ ಬಗ್ಗೆ ಟಿವಿಯಲ್ಲಿ ಜಾಹಿರಾತು ನೀಡಿದ ಅಧ್ಯಕ್ಷರ ಸಲಹೆಗಾರ ಕೆಲ್ಲ್ಯಾನ್ ಕಾನ್ವೆ ಕಾಣಿಸಿಕೊಂಡಿರುವುದಕ್ಕೆ ಅವರ ವಿರುದ್ಧ ತನಿಖೆ ನಡೆಸುವಂತೆ ಅಮೆರಿಕಾ ಸರ್ಕಾರದ ನೈತಿಕ ಕಚೇರಿ (ಒಜಿಇ) ಆಗ್ರಹಿಸಿದೆ.
ಮಂಗಳವಾರ ಶ್ವೇತಭವನದ ಉಪ ಕೌನ್ಸಲ್ ಸ್ಟಿಫನ್ ಪಸ್ಸಅಂಟಿನೊ ಅವರಿಗೆ ಬರೆದ ಪತ್ರದಲ್ಲಿ, ಕಾನ್ವೆ ಹೇಳಿಕೆಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಒಜಿಇ ನಿರ್ದೇಶಕ ವಾಲ್ಟರ್ ಶೌಬ್ ಹೇಳಿದ್ದಾರೆ.
"ಅಧಿಕಾರದ ನಿಯಮಗಳನ್ನು ಕಾನ್ವೆ ಮುರಿದಿರುವುದಕ್ಕೆ ಗಟ್ಟಿಯಾದ ಪುರಾವೆಗಳಿವೆ ಆದುದರಿಂದ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು" ಎಂದು ಶೌಬ್ ಪತ್ರದಲ್ಲಿ ಬರೆದಿರುವುದಾಗು ಟೈಮ್ ಪತ್ರಿಕೆ ವರದಿ ಮಾಡಿದೆ.
ಫಾಕ್ಸ್ ನ್ಯೂಸ್ ಗೆ ನೀಡಿದ್ದ ಸಂದರ್ಶನದ ಸಂದರ್ಶನವೊಂದರಲ್ಲಿ ಇವಾಂಕ ಟ್ರಂಪ್ ಅವರ ಒಡೆತನದ ಸಂಸ್ಥೆಯ ಬಟ್ಟೆಗಳನ್ನು ಕೊಂಡುಕೊಳ್ಳುವಂತೆ ಜಾಹಿರಾತು ನೀಡಿದ್ದ ಕಾನ್ವೆ "ಹೋಗಿ ಇವಾಂಕ ಅವರ ವಸ್ತುಗಳನ್ನು ಖರೀದಿಸಿ. ಅದ್ಭುತವಾದವು, ನನ್ನ ಬಳಿಯೂ ಕೆಲವಿವೆ" ಎಂದಿದ್ದರು.
ಇದರ ಬಗ್ಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಿನ್ ಸ್ಪೈಸರ್ ಅವರನ್ನು ಪ್ರಶ್ನಿಸಿದಾಗ "ಈ ವಿಷಯವಾಗಿ ಅವರಿಗೆ ನಿಯಮಗಳನ್ನು ತಿಳಿಸಿಕೊಡಲಾಗುತ್ತಿದೆ. ಅಷ್ಟೇ" ಎಂದಿದ್ದಾರೆ.