ಬಂದರು ನಿರ್ಮಾಣಕ್ಕೆ ಹೊರತಾಗಿ ಚೀನಾ ದೊಂದಿಗೆ ಶ್ರೀಲಂಕಾ 15,000 ಎಕರೆಯಷ್ಟು ಭೂಮಿಯಲ್ಲಿ ಕೈಗಾರಿಕಾ ವಲಯ ನಿರ್ಮಿಸುವುದಕ್ಕೂ ಶ್ರೀಲಂಕಾ ಒಪ್ಪಂದ ಮಾಡಿಕೊಂಡಿದೆ. ಆದರೆ ಕೈಗಾರಿಕಾ ವಲಯಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳುವುದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಪಕ್ಸೆ ಆಪ್ತ ಸಂಸದರು ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.