ಮಾರ್ಗ ತಿಳಿಯಲು ಸೇನಾ ಹೆಲಿಕಾಫ್ಟರನ್ನೆ ರಾಷ್ಟ್ರೀಯ ಹೆದ್ದಾರಿಗೆ ಇಳಿಸಿದ ಪೈಲಟ್!

ವಾಯು ಮಾರ್ಗದ ದಾರಿ ತಪ್ಪಿದ್ದರಿಂದ ಸೇನಾ ಹೆಲಿಕಾಫ್ಟರ್ ಹಾರಿಸುತ್ತಿದ್ದ ಕಜಕಿಸ್ತಾನದ ಪೈಲಟ್ ಒಬ್ಬ ಹೆದ್ದಾರಿಯಲ್ಲೇ ಹೆಲಿಕಾಫ್ಟರ್ ಅನ್ನು ಇಳಿಸಿದ ಘಟನೆ ಕಜಕಿಸ್ತಾನದಲ್ಲಿ...
ಸೇನಾ ಹೆಲಿಕಾಫ್ಟರ್
ಸೇನಾ ಹೆಲಿಕಾಫ್ಟರ್
ವಾಯು ಮಾರ್ಗದ ದಾರಿ ತಪ್ಪಿದ್ದರಿಂದ ಸೇನಾ ಹೆಲಿಕಾಫ್ಟರ್ ಹಾರಿಸುತ್ತಿದ್ದ ಕಜಕಿಸ್ತಾನದ ಪೈಲಟ್ ಒಬ್ಬ ಹೆದ್ದಾರಿಯಲ್ಲೇ ಹೆಲಿಕಾಫ್ಟರ್ ಅನ್ನು ಇಳಿಸಿದ ಘಟನೆ ಕಜಕಿಸ್ತಾನದಲ್ಲಿ ನಡೆದಿದೆ. 
ವಾಯು ಮಾರ್ಗ ತಪ್ಪಿದ್ದರಿಂದ ಕಂಟ್ರೋಲ್ ರೂಮಿಗೆ ಪೈಲಟ್ ಸಂದೇಶ ರವಾನಿಸಿದ್ದಾನೆ. ಅಲ್ಲಿಂದ ಯಾವುದೇ ಸೂಕ್ತ ಉತ್ತರ ಸಿಗದ ಕಾರಣ ಮಾರ್ಗ ತಿಳಿಯುವ ಸಲುವಾಗಿ ಪೈಲಟ್ ಹೆದ್ದಾರಿಯಲ್ಲೇ ಸೋವಿಯತ್ ರಷ್ಯಾ ನಿರ್ಮಿತ ಮಿಗ್-8 ಹೆಲಿಕಾಫ್ಟರ್ ಅನ್ನು ಇಳಿಸಿ ಹೈವೇಯಲ್ಲಿ ನಿಂತಿದ್ದ ಟ್ರಕ್ ಡ್ರೈವರ್ ಅನ್ನು ತಾನು ಹೋಗಬೇಕಾದ ವಿಳಾಸ ಕೇಳಿ ನಂತರ ಆತನ ಕೈಕುಲುಕಿ ತೆರಳಿದ್ದಾನೆ. 
ಈ ವಿಡಿಯೋವನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com