ನನ್ನ ಗೃಹ ಬಂಧನಕ್ಕೆ ಮೋದಿ-ಟ್ರಂಪ್ ಸ್ನೇಹವೇ ಕಾರಣ: ಉಗ್ರ ಹಫೀಜ್ ಸಯೀದ್

ನನ್ನನ್ನು ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿರಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸ್ನೇಹವೇ ಕಾರಣ ಎಂದು 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ಹಫೀಜ್ ಸಯೀದ್...
ಪ್ರಧಾನಿ ಮೋದಿ, ಉಗ್ರ ಹಫೀಜ್ ಸಯೀದ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್
ಪ್ರಧಾನಿ ಮೋದಿ, ಉಗ್ರ ಹಫೀಜ್ ಸಯೀದ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್
Updated on: 

ಕರಾಚಿ: ನನ್ನನ್ನು ಪಾಕಿಸ್ತಾನ ಸರ್ಕಾರ ಗೃಹ ಬಂಧನದಲ್ಲಿರಿಸಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಸ್ನೇಹವೇ ಕಾರಣ ಎಂದು 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ಹಫೀಜ್ ಸಯೀದ್ ಮಂಗಳವಾರ ಆರೋಪಿಸಿದ್ದಾನೆ.

ಹಫೀಜ್ ಸಯೀದ್ ಭಾರತ ಹಾಗೂ ಅಮೆರಿಕ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳ ಪ್ರವೇಶಕ್ಕೆ ಅಮೆರಿಕಾ ನಿರ್ಬಂಧ ಹೇರಿತ್ತು. ಪಾಕಿಸ್ತಾನ ಕೂಡ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದು, ಭಯೋತ್ಪಾದಕಾ ದಾಳಿಯೆ ಬೆದರಿಕೆಯುಳ್ಳ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಸೇರಿದೆ. ಈ ಹಿನ್ನಲೆಯಲ್ಲಿ ಅಮೆರಿಕ ರಾಷ್ಟ್ರ ಶೀಘ್ರದಲ್ಲಿಯೇ ಪಾಕಿಸ್ತಾನದ ಮೇಲೂ ನಿಷೇಧ ಹೇರಲಿಗೆ ಎಂಬ ಸುಳಿವನ್ನು ಇತ್ತೀಚೆಗಷ್ಟೇ ಶ್ವೇತ ಭವನ ಸುಳಿವು ನೀಡಿತ್ತು.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪಾಕಿಸ್ತಾನ ಸರ್ಕಾರ ನಿನ್ನೆ ರಾತ್ರಿ ಹಫೀಜ್ ಸಯೀದ್ ಸೇರಿದಂತೆ ಇನ್ನೂ ನಾಲ್ವರು ಕುಖ್ಯಾತ ಉಗ್ರರಾದ ಅಬ್ದುಲ್ಲಾ ಉಬೈದ್, ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಅಬಿದ್ ಮತ್ತು ಖಾಜಿ ಕಾಶಿಪ್ ನಿಯಾಜ್ ಎಂಬುವವರನ್ನೂ ಗೃಹ ಬಂಧನ ವಿಧಿಸಿತ್ತು.

ಈ ಹಿನ್ನಲೆಯಲ್ಲಿ ಹಫೀಜ್ ಸಯೀದ್ ಪ್ರತಿಕ್ರಿಯೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋದಲ್ಲಿ ಸಯೀದ್, ತನ್ನ ಗೃಹ ಬಂಧನಕ್ಕೆ ಟ್ರಂಪ್ ಹಾಗೂ ಮೋದಿಯವರ ಸ್ನೇಹವೇ ಕಾರಣ ಎಂದು ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com