ದುಬೈ ಪೊಲೀಸ್ ಪಡೆಗೆ ಸೇರ್ಪಡೆಯಾದ ಮೊದಲ ರೋಬಾಟ್ ಕಾಪ್

ವಿಶ್ವದ ಮೊದಲ ರೋಬಾಟ್ ಅಧಿಕಾರಿ ದುಬೈ ಪೊಲೀಸ್ ಪಡೆಗೆ ಸೇರ್ಪಡೆಯಾಗಿದೆ. ದುಬೈಯ...
ದುಬೈಯ ಬುರ್ಜ್ ಖಲಿಫಾ ಕೆಳಗೆ ನಿಂತು ನೋಡುಗರ ಗಮನ ಸೆಳೆದ ರೋಬಾಟ್ ಪೊಲೀಸ್
ದುಬೈಯ ಬುರ್ಜ್ ಖಲಿಫಾ ಕೆಳಗೆ ನಿಂತು ನೋಡುಗರ ಗಮನ ಸೆಳೆದ ರೋಬಾಟ್ ಪೊಲೀಸ್
Updated on: 
ದುಬೈ: ವಿಶ್ವದ ಮೊದಲ ರೋಬಾಟ್ ಅಧಿಕಾರಿ ದುಬೈ ಪೊಲೀಸ್ ಪಡೆಗೆ ಸೇರ್ಪಡೆಯಾಗಿದೆ. ದುಬೈಯ ಲ್ಯೊಂಬೊರ್ಗಿನಿಸ್ ಮತ್ತು ಫೆರ್ರರಿಸ್ ನಲ್ಲಿ ರಸ್ತೆಗಳ ಗಸ್ತು ಕಾಯಲು ನಿಯೋಜಿಸಲಾಗಿದೆ.  
ಈ ರೊಬೊಟ್ ಅಧಿಕಾರಿ ಮೊನ್ನೆ ಬುಧವಾರ ರಾತ್ರಿ ವಿಶ್ವದ ಅತ್ಯಂತ ಎತ್ತರದ ಟವರ್ ಬುರ್ಜ್ ಖಲಿಫಾದ ಬುಡದಲ್ಲಿ ನಿಂತು ಎಲ್ಲರ ಗಮನ ಸೆಳೆಯಿತು. ಪಕ್ಕದಲ್ಲಿ ಹೋಗುತ್ತಿದ್ದ ದಾರಿಹೋಕರು ಪ್ರವಾಸಿಗರು ನಿಂತು ಫೋಟೋ, ಸೆಲ್ಫಿ ತೆಗೆಯುತ್ತಿದ್ದರು.
ಪೊಲೀಸ್ ಟೊಪ್ಪಿ ಧರಿಸಿ ವೀಲ್ ನಲ್ಲಿ ಚಲಿಸುತ್ತಿರುವ ರೊಬೊಟ್ ಎದೆಯಲ್ಲಿ  ಕಂಪ್ಯೂಟರ್ ಟಚ್ ಸ್ಕ್ರೀನ್  ಇದೆ. ಇದನ್ನು ಅಪರಾಧ ಪ್ರಕರಣಗಳನ್ನು ವರದಿ ಮಾಡಲು ಬಳಸಲಾಗುತ್ತದೆ ಅಲ್ಲದೆ ಟಿಕೆಟ್ ಗಳ ವೇಗವನ್ನು ಕೂಡ ತಪಾಸಣೆ ಮಾಡುತ್ತದೆ.
ಪೊಲೀಸ್ ಪಡೆಯಲ್ಲಿ 2030ರ ವೇಳೆಗೆ ರೋಬಾಟ್ ಗಳ ಸಂಖ್ಯೆಯನ್ನು ಶೇಕಡಾ 25ಕ್ಕೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದು ದುಬೈ ಪೊಲೀಸ್ ಸ್ಮಾರ್ಟ್ ಸರ್ವಿಸಸ್ ನ ಮುಖ್ಯಸ್ಥ ಬ್ರಿಗೇಡಿಯರ್ ಖಲೆದ್ ಅಲ್-ರಝೂಕಿ ತಿಳಿಸಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಮುಖ್ಯವಾಗಿ ರೋಬಾಟ್ ಗಳನ್ನು ನಿಯೋಜಿಸಲಾಗುತ್ತಿದ್ದು ಅದರಲ್ಲಿ ಕ್ಯಾಮರಾವಿದ್ದು ಅದು ಲೈವ್ ದೃಶ್ಯಗಳನ್ನು ಕಾರ್ಯಚರಣೆ ಕೋಣೆಗಳಿಗೆ ರವಾನಿಸುತ್ತಿದೆ. ಅಲ್ಲಿ ಪೊಲೀಸರಿಗೆ ಬೇಕಾಗುವ ಶಂಕಿತರನ್ನು ಗುರುತಿಸುತ್ತದೆ. ಆದರೆ ಜನರನ್ನು ಬಂಧಿಸುವ ಕೆಲಸದಲ್ಲಿ ಪೊಲೀಸರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ರಝೂಕಿ ಹೇಳುತ್ತಾರೆ.
ಪೊಲೀಸ್ ಪಡೆ ದುಬೈಯಲ್ಲಿ ಬೆಳವಣಿಗೆ ಹೊಂದುತ್ತಿರುವ ಪ್ರವಾಸಿ ತಾಣವಾಗಿದ್ದು ಕಳೆದ ವರ್ಷ ಸುಮಾರು 15 ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸಿದೆ. ಈ ಹಿಂದೆ ದುಬಾರಿ ಕಾರುಗಳನ್ನು ಗಸ್ತು ವಾಹನಗಳಾಗಿ ಪರೇಡ್ ಮಾಡಿಸಿ ಮಾಧ್ಯಮಗಳ ಗಮನ ಸೆಳೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com