ಮಯನ್ಮಾರ್: ಪತನವಾಗಿದ್ದ ವಿಮಾನದ ಅವೇಶಷ ಪತ್ತೆ ಮಾಡಿದ ಸೇನೆ!

ಇತ್ತೀಚೆಗೆ ನಾಪತ್ತೆಯಾಗಿದ್ದ ಮಯನ್ಮಾರ್ ವಿಮಾನದ ಅವಶೇಷಗಳು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೇಪಿಡಾ: ಇತ್ತೀಚೆಗೆ ನಾಪತ್ತೆಯಾಗಿದ್ದ ಮಯನ್ಮಾರ್ ವಿಮಾನದ ಅವಶೇಷಗಳು ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿಗಳು ಸೇರಿ ಸುಮಾರು 120 ಮಂದಿಯನ್ನು ಹೊತ್ತು ಸಾಗಿದ್ದ ವಿಮಾನ ಇತ್ತೀಚೆಗೆ ನಾಪತ್ತೆಯಾಗಿತ್ತು. ಇದೀಗ ಮಯನ್ಮಾರ್ ಸೇನೆ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ್ದು, ವಿಮಾನದಲ್ಲಿದ್ದ ಎಲ್ಲ 120 ಮಂದಿ  ಸಾವನ್ನಪ್ಪಿರಬಹುದು ಶಂಕಿಸಿಸಿದೆ. ಅಂಡಮಾನ್ ಸಮುದ್ರದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದು, ಕೆಲವು ಮೃತ ದೇಹಗಳು ಕೂ ಪತ್ತೆಯಾಗಿದೆ ಎಂದು ಮಯನ್ಮಾರ್ ಸೇನಾ ವಕ್ತಾರರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ನಾಪತ್ತೆಯಾಗಿದ್ದ ವಿಮಾನಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಅವಶೇಷಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com