ವೈಮಾನಿಕ ದಾಳಿಯಲ್ಲಿ ಇಸಿಸ್ ಮುಖಂಡ ಅಲ್ ಬಾಗ್ದಾದಿ ಹತ್ಯೆ: ರಷ್ಯಾ ಸೇನೆ

ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಮುಖಂಡ ಅಬೂ ಬಕರ್ ಅಲ್ ಬಾಗ್ದಾದಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ರಷ್ಯಾ
ಅಬೂ ಬಕರ್ ಅಲ್ ಬಾಗ್ದಾದಿ
ಅಬೂ ಬಕರ್ ಅಲ್ ಬಾಗ್ದಾದಿ
ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಮುಖಂಡ ಅಬೂ ಬಕರ್ ಅಲ್ ಬಾಗ್ದಾದಿಯನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ರಷ್ಯಾ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ. 
ಸಿರಿಯಾದ ರಖ್ಖಾ ಬಳಿ ಇಸಿಸ್ ಮುಖಂಡರು ಸಭೆ ಸೇರಲಿದ್ದಾರೆ ಎಂದು ಗುಪ್ತಚರ ಇಲಾಖೆಯಿಂದ ಬಂದ ಖಚಿತ ಮಾಹಿತಿ ಮೇರೆಗೆ ಮೇ 28ರಂದು ಅಲ್ಲಿ ರಷ್ಯಾ ಸೇನೆ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಬಾಗ್ದಾದಿ ಹತ್ಯೆಯಾಗಿದ್ದಾನೆ ಎಂದು ರಷ್ಯಾ ಸೇನೆ ಹೇಳಿಕೊಂಡಿದೆ. 
ಮೇ 28ರಂದು ಸಭೆ ನಡೆಯುತ್ತಿರುವ ಸ್ಥಳ ಮತ್ತು ಸಮಯವನ್ನು ದ್ರೋಣ್ ಮೂಲಕ ಖಚಿತಪಡಿಸಿಕೊಳ್ಳಲಾಯಿತು. ನಂತರ 12:35 ಮತ್ತು 12:45ರ ಸುಮಾರಿಗೆ ರಷ್ಯಾ ಸೇನೆ ನಿಗದಿತ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಇದರಲ್ಲಿ ಬಾಗ್ದಾದಿ ಹತ್ಯೆಯಾಗಿದೆ ಎಂದು ಹೇಳಲಾಗಿದೆ. 
ಇನ್ನು ಸ್ಥಳೀಯ ಮಾಧ್ಯಮಗಳು ಸಹ ಬಾಗ್ದಾದಿ ರಷ್ಯಾ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವುದಾಗಿ ವರದಿ ಮಾಡುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com