ಅಪ್ಪಂದಿರ ದಿನಕ್ಕೆ ಗೂಗಲ್ ನಿಂದ ವಿಶೇಷ ಡೂಡಲ್!

ವಿಶ್ವ ಅಪ್ಪಂದಿರ ದಿನದ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.
ಗೂಗಲ್ ಡೂಡಲ್ ಚಿತ್ರ
ಗೂಗಲ್ ಡೂಡಲ್ ಚಿತ್ರ

ನವದೆಹಲಿ: ವಿಶ್ವ ಅಪ್ಪಂದಿರ ದಿನದ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.

ಜೂನ್ 18ರಂದು ವಿಶ್ವಾದ್ಯಂತ ಅಪ್ಪಂದಿರ ದಿನವಾಗಿ ಆಚರಣೆ ಮಾಡಲಾಗುತ್ತಿದ್ದು,  ಗೂಗಲ್ ಕೂಡ ವಿಶ್ವ ಅಪ್ಪಂದಿರ ದಿನವನ್ನು ವಿಶೇಷವಾಗಿ ನೆನಪಿಸುವ ಪ್ರಯತ್ನ ಮಾಡಿದೆ.

ಕ್ಯಾಕ್ಟಸ್ ಗಿಡ ತನ್ನ ಮಗುವನ್ನು ಆರೈಕೆ ಮಾಡುವ ಚಿತ್ರಗಳನ್ನು ಡೂಡಲ್ ನಲ್ಲಿ ಬಿಡಿಸಿ ಅಪ್ಪಂದಿರ ಮಹತ್ವವನ್ನು ಗೂಗಲ್ ಸಾರಲು ಪ್ರಯತ್ನಿಸಿದೆ. ಮಗು ಕ್ಯಾಕ್ಟಸ್ ಗೆ ತಂದೆ ಕ್ಯಾಕ್ಟಸ್ ನೀರುಣಿಸುವ, ಮನರಂಜನೆ ನೀಡುವ ಪ್ರೀತಿ  ತೋರುವ ವಿಶೇಷ ಚಿತ್ರಗಳನ್ನು ಡೂಡಲ್ ನಲ್ಲಿ ಬಿಡಿಸಲಾಗಿದೆ.

ತಾಯಂದಿರ ದಿನದಂತೆಯೇ ಅಪ್ಪಂದಿರ ದಿನವನ್ನೂ ಕೂಡ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಜೂನ್ ತಿಂಗಳ ಮೂರನೇ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com