ನೈಜೀರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಸಾವು

ಈಶಾನ್ಯ ನೈಜೀರಿಯಾದ ನಿರಾಶ್ರಿತರ ಕ್ಯಾಂಪ್ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈದುಗುರಿ: ಈಶಾನ್ಯ ನೈಜೀರಿಯಾದ ನಿರಾಶ್ರಿತರ ಕ್ಯಾಂಪ್ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ಸೋಮವಾರ ತುರ್ತು ಸೇವಾ ಸಂಸ್ಥೆ ತಿಳಿಸಿದೆ.
ಭಾನುವಾರ ರಾತ್ರಿ 8.45ರ ಸುಮಾರಿಗೆ ಕೋಫಾ ಗ್ರಾಮದ ದಲೋರಿ ನಿರಾಶ್ರಿತರ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ರಾಷ್ಟ್ರೀಯ ತುರ್ತು ಸೇವೆ ನಿರ್ವಹಣಾ ಸಂಸ್ಥೆ(ಎನ್ ಇಎಂಎ) ತಿಳಿಸಿದೆ.
ಇಬ್ಬರು ಮಹಿಳೆಯರು ಬೋಕೋ ಹರಾಮ್ ಹಿಂಸಾಚಾರದಿಂದ ಮನೆ-ಮಠ ಕಳೆದುಕೊಂಡವರಿಗಾಗಿ ನಿರ್ಮಿಸಲಾಗಿದ್ದ ನಿರಾಶ್ರಿತರ ಕ್ಯಾಂಪ್ ಗೆ ಪ್ರವೇಶಿಸಲು ಯತ್ನಿಸಿದ್ದು. ಅವರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೆ ಅವರೊಂದಿಗೆ ಬಂದಿದ್ದ ಮತ್ತಿಬ್ಬರು ಮಹಿಳೆಯರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ ಎಂದು ಎನ್ ಇಎಂಎ ಈಶಾನ್ಯ ವಕ್ತಾರ ಅಬ್ದುಲ್ ಕದಿರ್ ಇಬ್ರಾಹಿಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ದಾಳಿಯಲ್ಲಿ ಉಗ್ರರನ್ನು ಹೊರತುಪಡಿಸಿ 16 ಮಂದಿ ಸಾರ್ವಜನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com