ನೀರಿನ ಟಬ್‌ನಲ್ಲಿ ಗೊರಿಲ್ಲಾ ಸಖತ್ ಡ್ಯಾನ್ಸ್, ವಿಡಿಯೋ ವೈರಲ್

ಮನುಷ್ಯನಂತೆ ವರ್ತಿಸುವ ಗೊರಿಲ್ಲಾಗಳು ಕೆಲವೊಮ್ಮೆ ಮನುಷ್ಯರೆ ನಾಚುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಮೆರಿಕದ ಡಲ್ಲಾಸ್ ಮೃಗಾಲಯದಲ್ಲಿ ಗೊರಿಲ್ಲಾವೊಂದು...
ಗೊರಿಲ್ಲಾ ಡ್ಯಾನ್ಸ್
ಗೊರಿಲ್ಲಾ ಡ್ಯಾನ್ಸ್
ಮನುಷ್ಯನಂತೆ ವರ್ತಿಸುವ ಗೊರಿಲ್ಲಾಗಳು ಕೆಲವೊಮ್ಮೆ ಮನುಷ್ಯರೆ ನಾಚುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಮೆರಿಕದ ಡಲ್ಲಾಸ್ ಮೃಗಾಲಯದಲ್ಲಿ ಗೊರಿಲ್ಲಾವೊಂದು ನೀರಿನ ಟಬ್ ನಲ್ಲಿ ಡ್ಯಾನ್ಸ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
14 ವರ್ಷದ ಗಂಡು ಗೊರಿಲ್ಲಾ ಜೋಲಾ ಖುಷಿಯ ಮೂಡ್ ನಲ್ಲಿ ಇಂತು ಅಂತ ಕಾಣುತ್ತೆ. ಸ್ನಾನ ಮಾಡಲು ನೀರಿನ ಟಬ್ ಗೆ ಇಳಿದ್ದ ಜೋಲಾ ಸಖತ್ತಾಗಿ ಸ್ಟೆಪ್ ಹಾಕಿದೆ. ಇದನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿ ಯುಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾರೆ. 
ಜೂನ್ 20ರಂದು ಗೊರಿಲ್ಲಾ ಡ್ಯಾನ್ಸ್ ವಿಡಿಯೋ ಯುಟ್ಯೂಬ್ ಗೆ ಅಪ್ ಲೋಡ್ ಆಗುತ್ತಿದ್ದಂತೆ ಇಲ್ಲಿಯವರೆಗೂ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com