ಬ್ರಿಟನ್ ಸಂಸತ್ತು ಮೇಲೆ ದಾಳಿ: ಮತ್ತೊಬ್ಬ ಬಂಧನ

ಮೊನ್ನೆ ಬುಧವಾರ ಬ್ರಿಟನ್ ಸಂಸತ್ತು ಬಳಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ಮತ್ತಿಬ್ಬನನ್ನು...
ರಕ್ಷಣಾ ಪಡೆ ಕಾರ್ಯ
ರಕ್ಷಣಾ ಪಡೆ ಕಾರ್ಯ
ಲಂಡನ್:ಮೊನ್ನೆ ಬುಧವಾರ ಬ್ರಿಟನ್ ಸಂಸತ್ತು ಬಳಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ಮತ್ತಿಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರನ್ನು ಆಡ್ರಿಯನ್ ರಸೆಲ್ ಎಂದು ಗುರುತಿಸಲಾಗಿದ್ದು ಸಾರ್ವಜನಿಕರಿಂದ ಆತನ ಬಗ್ಗೆ ಮಾಹಿತಿಗೆ ಕೋರಲಾಗಿದೆ.
ಕಳೆದ ರಾತ್ರಿಯಿಂದ ಬೆಳಗಿನವರೆಗಿನ ಅವಧಿಯಲ್ಲಿ ಮತ್ತಿಬ್ಬರನ್ನು ಬಂಧಿಸಿದ್ದೇವೆ ಎಂದು ಭಯೋತ್ಪಾದನ ವಿರೋಧಿ ಕಮಾಂಡರ್ ಮಾರ್ಕ್ ರೌಲೆ ತಿಳಿಸಿದ್ದಾರೆ.ದಾಳಿಗೆ ಸಂಬಂಧಪಟ್ಟಂತೆ ಪ್ರಸ್ತುತ 9 ಮಂದಿ ಬಂಧನದಲ್ಲಿದ್ದಾರೆ. ಈ ಹಿಂದೆ ಬಂಧಿಸಲ್ಪಟ್ಟಿದ್ದ ಓರ್ವ ಮಹಿಳೆಯನ್ನು ಜಾಮೀನಿನ ಮೇಲೆ ಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com