ಸರ್ಕಾರಿ ಸೆಕ್ಯೂರಿಟಿ ಗಾರ್ಡ್ ಗುಂಡಿಗೆ ಸೋಮಾಲಿಯ ಸಚಿವ ಬಲಿ

ಸೊಮಾಲಿಯ ಸರ್ಕಾರದ ಸಾರ್ವಜನಿಕ ಕೆಲಸ ಮತ್ತು ಪುನರ್ನಿರ್ಮಾಣ ಸಚಿವ ಅಬ್ಬಾಸ್ ಅಬ್ದುಲ್ಲಾ ಶಿರಾಜಿ ಸಾವನ್ನಪ್ಪಿದ್ದಾರೆ. ಮೊಗದಿಶುವಿನಲ್ಲಿ ಬುಧವಾರ ಆಕಸ್ಮಿಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೊಗದಿಶು: ಸೊಮಾಲಿಯ ಸರ್ಕಾರದ ಸಾರ್ವಜನಿಕ ಕೆಲಸ ಮತ್ತು ಪುನರ್ನಿರ್ಮಾಣ ಸಚಿವ ಅಬ್ಬಾಸ್ ಅಬ್ದುಲ್ಲಾ ಶಿರಾಜಿ ಸಾವನ್ನಪ್ಪಿದ್ದಾರೆ. ಮೊಗದಿಶುವಿನಲ್ಲಿ ಬುಧವಾರ ಆಕಸ್ಮಿಕ ಗುಂಡೇಟಿಗೆ ಶಿರಾಜಿ ಬಲಿಯಾಗಿದ್ದಾರೆ.
ಇದೊಂದು ಅತ್ಯಂತ ನೋವಿನ ಸಂಗತಿ, ಶಿರಾಜಿ ಸೋಮಾಲಿಯಾ ಸಂಪುಟದ ಕಿರಿಯ ಸಚಿವರಾಗಿದ್ದರು. 2016ರ ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೂ ಮುನ್ನ ಕೀನ್ಯಾ ನಿರಾಶ್ರಿತರ ಶಿಬಿರದಲ್ಲಿ ಬೆಳೆದರು ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.
ಅಧ್ಯಕ್ಷೀಯ ಅರಮನೆಯ ಹೊರಭಾಗದಲ್ಲಿ ಸರ್ಕಾರಿ ಸೆಕ್ಯೂರಿಟಿ ಗಾರ್ಡ್ ನ ಗುಂಡೇಟಿಗೆ ಬಲಿಯಾಗಿದ್ದಾರೆ. ಆಕಸ್ಮಿಕವಾಗಿ ಸೆಕ್ಯೂರಿಟಿ ಗಾರ್ಡ್ ಗನ್ ನಿಂದ ಫೈರ್ ಆಗ ಗುಂಡು ಶಿರಾಜಿ ಚಲಿಸುತ್ತಿದ್ದ ವಾಹನಕ್ಕೆ ಬಡಿದು ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com