ಉಗ್ರ ಸಯೀದ್ ಕೊಲೆಗೆ ವಿದೇಶಿ ಗೂಢಾರ ಸಂಸ್ಥೆ ಯತ್ನ: ಪಾಕಿಸ್ತಾನಕ್ಕೆ ಆತಂಕ

ಉಗ್ರ ಹಫೀಜ್ ಸಯೀದ್ ನನ್ನು ಕೊಲ್ಲಲು ವಿದೇಶಿ ಗೂಢಾಚಾರ ಸಂಸ್ಥೆಯೊಂದು ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ...
ಹಫೀಜ್ ಸಯೀದ್
ಹಫೀಜ್ ಸಯೀದ್
Updated on
ಇಸ್ಲಾಮಾಬಾದ್: ಉಗ್ರ ಹಫೀಜ್ ಸಯೀದ್ ನನ್ನು ಕೊಲ್ಲಲು ವಿದೇಶಿ ಗೂಢಾಚಾರ ಸಂಸ್ಥೆಯೊಂದು ಯತ್ನಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. 
ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಮ್ತತು ಅನಲಿಸಿಸ್ ವಿಂಗ್(RAW)ಅನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಪಾಕಿಸ್ತಾನ ಈ ಹಿನ್ನೆಲೆಯಲ್ಲಿ ಪಂಜಾಬ್ ಗೃಹ ಇಲಾಖೆಗೆ ಮುಂಬೈ ಉಗ್ರ ದಾಳಿಯ ರೂವಾರಿ ಬಂಧಿತ ಹಫೀಜ್ ಸಯೀದ್ ಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಕೋರಿದೆ. 
ಹಫೀಜ್ ಸಯೀದ್ ನನ್ನು ಬಂಧಿಸಿದ್ದು ಆತನನ್ನು ಪಂಜಾಬ್ ಪ್ರಾಂತ್ಯದಲ್ಲಿರುವ ಆತನ ಮನೆಯಲ್ಲೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಉಗ್ರ ವಿರೋಧಿ ಸಂಸ್ಥೆ(ಎನ್ಸಿಟಿಎ) ಪಂಜಾಬ್ ಪ್ರಾಂತ್ಯದ ಗೃಹ ಇಲಾಖೆಗೆ ಪತ್ರವೊಂದನ್ನು ಕಳುಹಿಸಿದ್ದು ಸಯೀದ್ ನನ್ನು ಮುಗಿಸಲು ನಿಷೇಧಿತ ಉಗ್ರ ಸಂಘಟನೆಯ ಇಬ್ಬರಿಗೆ 80ಸ ಲಕ್ಷ ರುಪಾಯಿ ನೀಡಿದೆ ಎಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com